ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಏನೇ ಬರಲಿ ಹೃದಯಪೂರ್ವಕ ಸ್ವಾಗತ...
ಸ್ವಾಗತ ಸುಸ್ವಾಗತ
ನೋವೇ ಆಗಲಿ ನಗುನಗುತ ಸ್ವಾಗತ...
ಗೆಳೆಯರೇ ಓ ಗೆಳೆಯರೇ
ಈ ಲೋಕವೇ ನಮ್ಮ ಸ್ನೇಹಿತ...
ದಿನದಿನವೂ ಅನುಕ್ಷಣವು ಮನವಾಗಲಿ ಜಗ ಎನಿಸಲಿ ಹೊಸ ಸಂತೋಷ ಸಂಗೀತ...
ಸೂರ್ಯ ಮುಳುಗುವ ಹಾಗೆ ಚಂದ್ರ ನಗುವ ಹಾಗೆ ಜೀವನ
ನಿನ್ನೆಯ ಯಾತನೆ ನಾಳೆಯ ಯೋಚನೆ ಯಾಕೆ ಸುಮ್ಮನೆ
ಈ ದಿನವೇ ನಗುತಿರಬೇಕು ನೀನು ಕಿಲಕಿಲನೆ...
ಬಾಳಬಂಡಿ ನಡೆಸು ನೀನು ಜೊತೆಯಾಗಿ ಸಾಗುತ
ನಾನು ನನ್ನದು ಎಲ್ಲ ನಾಶವಾಗೋದು ಖಚಿತ
ಪ್ರೀತಿ ಸ್ನೇಹ ಒಂದೇ ಎಂದೆಂದೂ ಶಾಶ್ವತ...
ಮರುಭೂಮಿ ಇರುವ ಹಾಗೆ ನದಿ ಹರಿವ ಹಾಗೆ ಜೀವನ
ದ್ವೇಷರೋಷ ಏಕೆ ನಿನಗೆ ಧನಕನಕ ಬರದು ಕೊನೆಗೆ
ಒಲವಿನ ಕಡಲಿಗೆ ನೀನು ಧುಮುಕು,ಪರರ ಒಳಿತಿಗಾಗಿ ಬದುಕು...
ನಕ್ಕರೆ ನಿನ್ನ ಬಾಳು ಸುಂದರ ನಗಿಸಿದರೆ ನಿನ್ನ ಹೆಸರು ಅಮರ
ಸುಳ್ಳು ಮೋಸ ಎಲ್ಲ ನಾಶವಾಗೋದು ಖಚಿತ
ದಾನ ಧರ್ಮ ಒಂದೇ ಎಂದೆಂದೂ ಶಾಶ್ವತ...
- suresh
18 Mar 2019, 07:57 am
Download App from Playstore: