ಹೋಳಿ ಸಂಭ್ರಮ

ಹಬ್ಬ ಹಬ್ಬ ಹೋಳಿ ಹಬ್ಬ
ಬಗೆ ಬಗೆ ಬಣ್ಣ ಹಚ್ಚೋ ಹಬ್ಬ..
ಹಬ್ಬ ಹಬ್ಬ ಹೋಳಿ ಹಬ್ಬ
ಬಾಳಿಗೆ ಒಲವಿನ ಬಣ್ಣ ತುಂಬೋ ಹಬ್ಬ..

ಹಾದಿ ಬೀದಿ ಊರೆಲ್ಲ
ಏಳೇಳು ಬಣ್ಣದ ಸವಿಬೆಲ್ಲ..
ಮನೆಮಂದಿ ತನುಮನವೆಲ್ಲ
ಒಲವಿನ ಪಾತರಗಿತ್ತಿ ಆಯ್ತಲ್ಲ..

ರಂಗಿನ ಬಳಗ ಸೇರೋಣ
ಬಣ್ಣದ ಕಡಲಿಗೆ ಧುಮುಕೋಣ..
ನಾಚಿಕೆಯಿಂದ ಓಡೋರ ಹಿಡಿಯೋಣ
ತನುವಿನ ತುಂಬ ಕಾಮನಬಿಲ್ಲನು ಬರೆಯೋಣ..
ಮಳೆಯಲಿ ನೆನೆದಂತೆ
ಓಲವಿನ ಓಕುಳಿಯಲಿ ಕುಣಿಯೋಣ..
ನವಿಲಿನ ಗರಿಗಳಂತೆ
ಶ್ವೇತ ವಸ್ತ್ರಗಳ ಮಾಡೋಣ..

ಬಣ್ಣದ ಸಂಭ್ರಮ ಸಂತಸದ ಸರಿಗಮ
ಬೆರಗಾಗಿ ನಿಂತಿವೆ ರಂಗು ರಂಗಿನ ಕುಸುಮ
ಧರೆಗಿಳಿವೆ ಎಂದನು ಬಾನ ಚಂದ್ರಮ..
ನಮಗಿಲ್ಲಿ ಜಾತಿ ಧರ್ಮದ ಬೇಧವಿಲ್ಲ
ಪ್ರೀತಿ ಸ್ನೇಹದ ಬಣ್ಣ ಹಚ್ಚೋಣ ಬಂದವರಿಗೆಲ್ಲ..
ಆ ಪರಶಿವನಿಂದ ಕಾಮನ ಭಸ್ಮವಾದಂತೆ
ನಾವೆಲ್ಲ ದ್ವೇಷರೋಷವ ದಹನ ಮಾಡೋಣ..

- suresh

20 Mar 2019, 07:58 am
Download App from Playstore: