ಸ್ಪರ್ಧಾಲೋಕ

ಸ್ಪರ್ಧಾ ಸಾಗರದಲ್ಲಿ
ಕುಂಟುತ್ತಾ ಸಾಗುವ
ಕೂರ್ಮನು ನಾನಾದೆನೆ

ಸ್ಪರ್ಧಾಂಗಣದಲ್ಲಿ
ವೀರಾಗ್ರಣಿಗಳ ಹೋರಾಟದಲ್ಲಿ
ಕೂಪ ಮಂಡೂಕನಾನಾಗಿಹೆನೆ

ತಯಾರಿಯ ತೊರೆದು
ತೋರಿಕೆಯ ಮೆರೆದು
ಮಿತ್ಯಲೋಕದಧಿಪತಿನಾನಾದೆನೆ

ಉತ್ತರನ ಪೌರುಷದಿ
ಹಿರಿಮೆಯ ಬಯಸಿ
ಸ್ವಪ್ನಲೋಕದ ಸುಂದರಿನಾನಾದೆನೆ

ಗುರಿಯಿಂದ ಸರಿದು
ಗುಲಾಮಗಿರಿಗೆ ಒಲಿದ
ಬಲಿಪಶುನಾನಾದೆನೆ

ಸಾಧಿಸುವ ಛಲವಿಲ್ಲದೆ
ನಿರ್ಧರಿಸುವ ಬಲವಿಲ್ಲದೆ
ಸವೆಯುತಿಹುದು ಕಾಲ



ಶಾರದ

- ಶಕುಂತಲಾ

27 Mar 2019, 04:44 pm
Download App from Playstore: