ತಳಮಳ ಸಾಕು ತನುವೆ

ತಳಮಳ ಸಾಕು ತನುವೆ ನಾಳೆಗೆಲ್ಲ
ನೀನಾಗೇ ಮರೆಯುವೆ, ಏತಕೆ ನೆನ್ನೆಯನು
ಮತ್ತೆ ಮತ್ತೆ ಕರೆಯುವೆ ಸುಮ್ಮನಿರು ಸಾಲದೆ ನೋವುಂಡು ಕೊರಗಿರುವುದು ನಿನಗಿನ್ನು
ಬುದ್ದಿ ಬಂದಿಲ್ಲವೇ!?

ಯಾರು ನಿನ್ನವರು ನೆನ್ನೆಯಲ್ಲಿ ನಿನ್ನ
ಬಿಟ್ಟವರೇ,ಯಾರು ಪರರು ನಾಳೆಗಳಲ್ಲಿ
ನಿನ್ನ ಕೈ ಹಿಡಿದು ನಡೆಸುವವರೇ?

ತವಕಿಸಿ ನಿನ್ನಲ್ಲೇ ನೀ ಕಳೆದು ಹೋಗದಿರು,
ನಾಳೆಗೆಂದು ಸ್ವಲ್ಪ ಕೂಡಿಟ್ಟಿರು ನಿನ್ನ ನಗುವನು
ಮತ್ತೆ ಹುಡುಕ ಬೇಕಾದಿತು ಇತರರ ತುಟಿಯಲ್ಲಿ
ನಿನ್ನ ಸಂತೋಷಕೆಂದು!!

ಟೀಕಿಸುವವರ್ಯಾರು ತಾಳೆ ಹಾಕಿ ನೋಡರು
ನಿನ್ನ ಮನದಾಳದ ನೋವನ್ನು, ಬಿದ್ದ ಜಾಗದ
ಗುರುತು ಕಾಣರು ಎದ್ದ ನಿನ್ನ ನಗುವ ಹೊರೆತು,
ಹೊತ್ತು ತಿರುಗದಿರು ಭೂಮಿ ತೂಕದ ನೋವು
ನಿನ್ನ ಮನದಲ್ಲಿ ,ಆಗಸವುಂಟು ನಿನ್ನ
ನೋಡುತಲಿ ಕರೆಯುತ್ತಾ ಕಣ್ಣ ಅಂಚಲಿ.

- ಚುಕ್ಕಿ

09 Apr 2019, 10:05 pm
Download App from Playstore: