ನೋಡು ನೋಡೆನ್ನ ಅಂದವ



ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

ಕಣ್ಣ ತುದಿಯಲ್ಲಿ ನಿನ್ನ ಕಣ್ಣಿಂದ
ಕದ್ದ ನಮ್ಮಿಬ್ಬರ ಛಾಯೆ ನೋಡು,
ತುಟಿಯ ತುದಿಯಲ್ಲಿ ಮೂಗುತಿ
ನಾಚಿ ನಿಲ್ಲಿಸಿದ ಮಾತು ನೋಡು.

ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

ಕೆನ್ನೆ ಮೇಲೆ ಮಲಗಿರುವ ಕೆಂಪು ನೋಡು,
ಜಾಣ್ಮೆಯಿಂದ ಕೆನ್ನೆ ಕದ್ದು ಬೀಗುತಿರುವ
ಅದರ ನಗೆಯ ಇಂಪು ನೋಡು.

ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

ನಿನ್ನ ಬಯಸಿ ಸದ್ದಿಲ್ಲದೆ ಮನವು
ಕಿರುಚುವ ಕೋಪ ನೋಡು,
ನೀ ಸನಿಹ ಬಂದಾಗ ನಾ
ಮೌನವಾಗುವ ರೀತಿ ನೋಡು.

ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

- ಚುಕ್ಕಿ

17 Apr 2019, 05:20 pm
Download App from Playstore: