ಇವಳಿಗ್ಯಾಕೀ ಶಿಕ್ಷೆ
ಕನಸಲೂ ನೆನೆಸದ
ಭಯಂಕರ ಸಾವು
ಇವಳದಾದಾಗ
ಕಾಣಲೇ ಇಲ್ಲ ಯಾವ
ಕ್ಯಾಮೆರಾಗಳ ಕಣ್ಣಿಗೆ ಇವಳು.
ಕರುಣೆ ಪ್ರೀತಿಯಲ್ಲಿ
ಆಸೆ ಕನಸುಗಳು
ರಾಕ್ಷಸರಿಂದ ಚಿದ್ರವಾದಾಗ
ಕಾಯಲೇ ಇಲ್ಲ ಇವಳನ್ನ
ಇಲ್ಲಿ ಯಾವ ಕಾನೂನುಗಳು.
ರಾಜಕೀಯವೆಂಬ
ಮೋಸದ ಚದುರಂಗದಲ್ಲಿ
ನಿರತರಾದ ಎಲ್ಲ ನಾ....ಗಳು
ಹಣಕ್ಕೆ ಬಾಯಿತೆರೆದರೇ ವಿನಃ
ಕರಗಲಿಲ್ಲವಿಲ್ಲಿ ಯಾರ ಮನಗಳು.
ಇಂದು ಇವಳಿಗೆ ಇಲ್ಲಿ
ನ್ಯಾಯ ಸಿಗದೇ ಹೋದರೆ
ಸಮಾನತೆ ಸಹೋದರತೆ ಎಂಬ
ಪದಗಳನ್ನ ಅಳಿಸಿ ಹಾಕಬೇಕು
ಬದುಕಿಯೂ ಸಾಯುತ್ತಿರುವ
ನಮ್ಮೀ ಸಂವಿಧಾನದಲ್ಲಿ ನಾವುಗಳು
- ನಾಗರಾಜ ಬಾಕೆ೯ರ್
22 Apr 2019, 10:59 am
Download App from Playstore: