ಹನಿಗಳು..

ಇಳೆಯ ಮೇಲೊಂದು ಸುಮವಾಗಿ ಅರಳಿರುವ
ತರುಳೆ ಸೊಗಸುಗಾತಿ ಚೆಲುವಿ ಕೇಳೇ
ಹುಟ್ಟು ಹಬ್ಬವು ನಿನದು
ಸಡಗರದಿ ಬಂದಿಹುದು
ಬದುಕ ಬವಣೆಗಳ ಬದಿಗಿರಿಸಿ ಆಚರಿಸು
ಆನಂದ ಎಂದೆಂದೂ ನಿನಗಿರಲಿ
ನಗು ನಗುತ ಬಾಳುವೆ.
***
ನನ್ನ ಮನದ ಬರಡು ಹೊಲಕ್ಕೆ
ನಾನು ಬೇಲಿಯ ಹಾಕಿಲ್ಲ..
ಅದಕ್ಕೊ ಏನೋ ನೀನು
ಹೇಳದೆ ಕೇಳದೆ
ಆಗಾಗ ಬಂದು ಅಲ್ಲಿ
ಸುಳಿದಾಡುವೆಯಲ್ಲ..
***
ನಿನ್ನ ನುಡಿಯೊಂದ ಕೇಳದೆ
ಬೆಳಗೆಂದು ಆಗದು..
ಸವಿಮಾತ ಕೇಳದೆ
ದಿನವೊಂದು ಮುಗಿಯದು,
ನೀ ಮೌನ ತಾಳಲು
ನನ್ನ ಮನವು ತಾಳದು..
***
ಬೆಳಗೊ ಚಂದಿರ
ಮರೆಯಾಗದಿರು ಮೋಡದ ಹಿಂದೆ..
ಬಾನ ಮಂದಿರ
ಬರಿದಾಗಿ ತೋರುವುದ ಕಂಡೆ
ಬೆಳ್ಳಿ ಮೊಡವು
ಬಿಳುಪ ಕಳೆದುಕೊಂಡಿತೇಕೋ..
ನಳ್ಳಿರುವು ತಂಪು
ಮರೆತು ಹೋದುದೇಕೋ..

- ಶ್ರೀಗೋ.

14 May 2019, 09:54 am
Download App from Playstore: