ಅಮ್ಮ
ತಾಯಿಯ ಮನಸ್ಸು
ಅಮೂಲ್ಯವಾದ ಮೊಗ್ಗಿನ ಮನಸ್ಸು
ಆ ತಾಯಿಯ ಕನಸು
ಅಮೂಲ್ಯವಾದ ಕನಸು
ಆ ಕನಸನ್ನು ಮಾಡದಿದ್ದರೆ ನಾವು ನನಸು
ಹೊಡೆದುಹೋಗುವುದು ಆ ಮೊಗ್ಗಿನ ಮನಸ್ಸು
ಒಬ್ಬ ತಾಯಿ
ಅಂದ್ರೆ ಸೀತಮಾಯಿ
ನಮಗಾಗಿ ತ್ಯಾಗ ಮಾಡಿದ ತ್ಯಾಗಮಯಿ
ಹಸಿದಾಗ ಕೈ ತುತ್ತು ಕೊಟ್ಟ ಅನ್ನಪೂರ್ಣೇಶ್ವರಿ ತಾಯಿ
ಪ್ರೀತಿಯನ್ನು ಮೊಗೆದು ಕೊಟ್ಟ ತಾಯಿ
ಧೈರ್ಯವನ್ನು ತುಂಬುವ ತಾಯಿ
ನಿಮ್ಮ ಮಾತಿನ ಅಭಾವ
ಮುಂದಿನ ದಿನ ಬೀರುವುದು ಒಳ್ಳೆಯ ಪ್ರಭಾವ
ಆ ಮಾತುಗಳಿಂದ ಕಲಿಯುವೆವು ನಾವು ಹಾವಭಾವ
ನಮ್ಮ ಹಾವಭಾವದಿಂದ ಸಿಗುವುದು ನಮಗೆ ಗೌರವ
ಅಮ್ಮ ಎಂದರೆ ನನಗೆ ಜೀವ
ಅವಳ ಕನಸನ್ನು ನನಸು ಮಾಡುವುದು ನನ್ನ ಕರ್ತವ್ಯ
ಎಂದಿಗೂ ಹೀಗೆ ಇರಲಿ ನಮ್ಮ ಈ ಭಾಂಧವ್ಯ
ತ್ರಿಷಾ
- Trupthi Trupthi
16 May 2019, 03:29 pm
Download App from Playstore: