ಅರೆಗಪ್ಪು ಬಣ್ಣದ ಹುಡುಗಿ ....

     ೧

ಅರೆಗಪ್ಪು ಬಣ್ಣದ ಹುಡುಗಿ .........

ಅವಳು ಹಾಗಿದ್ದಳು ಸ್ವ‌ಪ್ನಲೋಕದ ಸುಂದರಿಯೇನಲ್ಲ ಆದರೆ ತನ್ನ ಚೆಲುವನ್ನೆಲ್ಲ ಆ ಕಣ್ಣಗಳಲ್ಲೇ ತುಂಬಿಕೊಂಡಿದ್ದಳು

ತನಷ್ಟಕ್ಕೆ ತಾನೇ ಮಾತಾಡಿಕೊಂಡ೦ತೆ
  ತನಗೆ ತಾನೇ ತಾನಾಗಿದ್ದವಳು ಬಾನಲ್ಲಿಯ
ಒಂಟಿ ಹಕ್ಕಿಯಂತೆ.

ನನ್ನ ಅಪ್ರಬುದ್ಧ ಪ್ರೀತಿಗೆ, ಅಸ೦ಖ್ಯ ಕಲ್ಪನೆಗಳಿಗೆ ಕಾರಣಳಾದವಳು ಅದ್ಭುತವಾದೊಂದು
ಬಾವ ಲಹರಿಗೆ ಸ್ಫೂರ್ತಿಯಾಗಿದ್ದಳು

ನನ್ನ ಅತಿರೇಕದ ವತ೯ನೆಗೆ ತುಂಟಾಟಗಳಿಗೆ ಅವಳ ಉತ್ತರ! ..,ನಿರಂತರ ಮೌನದ....ನಿರುತ್ತರ

ಅದು ಯಾವ ಸೃಷ್ಟಿಯ ಮಾಯೆಯೋ?ಸಹಜ ಅನುಭೂತಿಯೋ?
ಕತ್ತಲ ಕೂಪಕ್ಕೆ ತಳ್ಳುವವರ ನಡುವಿನಿಂದ ಕೈ ಹಿಡಿದು ಎಳೆದು ತಂದು ಬದುಕಿನ ಹಲವು ಆಯ್ಕೆಗಳ ಕವಲುದಾರಿಯಲ್ಲಿ ನಿಲ್ಲಿಸಿ ಹೋಗಿದ್ದಳು

ಅಸಾಮಾನ್ಯಳೆeನಲ್ಲ  ಅತೀ ಸಾಧಾರಣ ಹುಡುಗಿ
ಆದರೆ ಅವಳ ಚೆಲುವನ್ನೆಲ್ಲ ಅವಳ ಕಣ್ಣುಗಳಲ್ಲೇ ಕಂಡಿದ್ದೆನು

ಕೆನೆಹಾಲ ಬಣ್ಣದವಳೇನಲ್ಲ  ಅರೆಗಪ್ಪು ಬಣ್ಣದ ಹುಡುಗಿ

ನೆನಪಾದಳಷ್ಟೇ ಮರೆಯುವ ಮುನ್ನ !
       


ಸಿದ್ದಾಥ೯ ...........


ಕಾಠಿಣ್ಯತೆಯ ಪರಮಾವಧಿ ಅನುಸರಿಸಿ
ಮನೋನಿಗ್ರಹಮಾಡಿ ಮೋಕ್ಷ ಪಡೆದವರಲ್ಲಿ ಆನೇಕರು
ಇವನು ಅವರನ್ನು ಅನುಕರಸಿ ಮೋಕ್ಷ ಪಡೆಯಲೆತ್ನಿಸಿ ಸೋತಿದ್ದನು

ಮತ್ತೆ
ಜೀವನ ಸಾಥ೯ಕತೆಯ ರಹಸ್ಯ ಜ್ಞಾನಾನ್ವೇಷಣೆಯ ಹಿಂದೆ ಬಿದ್ದು ಮಧ್ಯೆ ದಾರಿಯಲ್ಲೆಲ್ಲೋ ಏನೂ ಅಥ೯ವಾಗದೆ ಬದುಕು ನಿರಥ೯ಕವೆನಿಸಿ ನಿರಾಸೆಗೊಂಡು ಏನೂ ಸಾಧಿಸದ ಸಾಧಕನ ಮನಃಸ್ಥಿತಿಯಲ್ಲಿದ್ದನು

ಆಗ ಎಲ್ಲರನ್ನು ತೊರೆದು ಎಲ್ಲವನ್ನು ತ್ಯಜಿಸಿ ನಡೆದವನು

ಈಗ ಪ್ರಕೃತಿಯು ನಿಯಮ ಮೀರದೆ
ಮಾನವ ಸಹಜ ಮನೋಭಾವಗಳಿಗೆ ಹಿಂತಿರುಗಿ
ಎಲ್ಲರಲ್ಲಿದ್ದುಕೊಂಡು ಎಲ್ಲರೊಳೊಂದಾಗಿ
ಎಲ್ಲರ ಜೊತೆಯಾಗಿ ಎಲ್ಲರನ್ನೋಳಗೊಂಡ ಸಮಬಾಳ್ವೆಯ‌ ಸಮಸಮಾಜವೊಂದನ್ನು ಸಿೃಷ್ಠಿಸಿ ನಿಜದ ಜ್ಞಾನ ಪಡೆದು ಬದುಕಿನ ಸಾಥ೯ಕತೆಯನ್ನು ಕಂಡುಕೊಂಡನು

ಎಲ್ಲರ ಪ್ರಶಾಂತ ಪ್ರಾಂಜಲ ಮನಸ್ಸಿನ
ಪ್ರತೀಕವಾಗಿರಿವವನು

ತನ್ನ ಆ ನಿಮ೯ಲ ಸ್ನಿಗ್ಧ‌ ಮುಗ‌ಳ್ನ‌ಗೆಯಿಂದ‌ಲೇ ಎಲ್ಲ‌ರ‌ನ್ನು ಗೆದ್ದಿರುವ‌ವನು

ನನ್ನ ಜಗತ್ತು ನ‌ನ್ನೊಂದಿಗೆ ಸಿೃಷ್ಠಿಯಾಗಿ ನ‌ನ್ನೊಂದಿಗೆ ಕೊನೆಯಾಗುವುದೆಂದು ನಂಬಿರುವ ನನ್ನನ್ನು
ತನ್ನ ನಿಗೂಢ ಪ್ರಶ್ನೆಗಳಿಂದ ಚಿಕ್ಕ೦ದಿನಿ೦ದಲೂ ಕಾಡುತ್ತಲೇ ಬಂದಿರುವನು ..........

- ಶಶಿಧರ ಹೆಚ್ ಎನ್

19 May 2019, 06:46 pm
Download App from Playstore: