"ಕವಿತೆಯಾದ ಕೋಗಿಲೆ"
ಜೀವನ ಚೈತ್ರದಲ್ಲಿ ವಸಂತನ ಆಗಮನ
ಉರಿಯುವ ಸೂರ್ಯನಿಗೆ ಹೆದರದ
ಪ್ರೀತಿ ಮುಗಿಲ ಮಳೆಬಿಲ್ಲು
ಹರೆಯದ ಕನಸಿಗೆ ಹಗಲೇನು ಇರುಳೇನು
ರಂಗು ರಂಗಿನ ಹೂವಂತ ಸ್ವಪ್ನಗಳು
ಎಲ್ಲೆಲ್ಲು ಚೆಲುವು
ಅರ್ಥವಾಗದ ಭಾವಗಳ ಸ್ವರ ಸಮ್ಮೇಳ
ಮಾಮರದ ಮೇಲೆ ಕುಳಿತ
ಕೋಗಿಲೆಯ ಕರೆಗೆ ಓಗೊಡುವ ಎದೆ
ಬಯಸಿದ್ದು ಏನೆಂದು ಅರಿಯುವುದರೊಳಗೆ
ವಸಂತನೇ ಮಾಯ
ಆಷಾಢದ ಗಾಳಿಗೆ ಹಾರಿಹೋದ ಕೋಗಿಲೆ
ಮತ್ತೆಂದು ಬರುವುದೆಂದು
ಕಾಯುವುದರಲ್ಲಿ ಹೋದ ಹೊತ್ತು
ಹೇಮಂತನ ಚಳಿಗೆ ಸಿಲುಕಿ ನಡುಗಿ ಹೋಯಿತು
ಕೋಗಿಲೆಯ ದನಿಯ ನೆನಪು
ಸುತ್ತ ಸುಳಿದು ಬೇಟೆಯಾಡಿ
ಕವಿತೆಯಾಯಿತು
ಭಾವಗೀತೆಯಾಯಿತು
© ೨೦೧೯ ಬಿ.ಎಸ್.ಸರೋಜ
೨೮/೦೫/೨೦೧೯
- Saroja BS
28 May 2019, 04:31 pm
Download App from Playstore: