ವೃಕ್ಷ ಮಾತೆ

ನಾ ಭೂತಾಯಿಯನ್ನು ಬಿಗಿದಪ್ಪಿಲು
ಕಾಂಕ್ರೀಟು ರೋಡ್ ಗಳು ಕಟ್ಟಿಯಾಗಿವೆ ಬೇರುಗಳಿಗೆ ನಿಲ್ಲಲು ಶಕ್ತಿ ಇಲ್ಲದೆ
ಬಲಹೀನವಾಗಿ ಧರೆಗೆ ಉರುಳುತ್ತಿರುವೇ
ತುಸು ಗಾಳಿಯ ರಭಸಕ್ಕೆ

ವರುಣನ ಸಿಂಚನದಲ್ಲಿ ಜಳಕವ ಮಾಡಿ
ನಾ ಹೇಗೆ ದಾಹ ತೀರಿಸಿಕೊಂಡು
ಬೆಳೆದು ನಿನಗೆ ಉಸಿರನ್ನು ನೀಡಲಿ
ನೀ ಹೇಳು ನಗರ ಮಾನವ ??

ತುಸು ತಾಪ ಹೆಚ್ಚಾದರೆ ಗೊಣಗುತ್ತಿಯ ಸುಮ್ಮನೆ
ಹನಿ ನೀರು ಸಿಗದಿದ್ದಾಗ ಕುದಿಯುತ್ತಿರುವೇ ಮೆಲ್ಲನೆ

ರೆಂಬೆ ಕೊಂಬೆ ಕಡಿದು ಮನೆ ಕಟ್ಟಿ ಮರೆತುಬಿಟ್ಟೆಯಾ
ನಾ ಮರೆತರೆ ನಿನಗೆ ಉಳಿಗಾಲ ಇದೆಯಾ
ನಿನ್ನ ಸಂಗಡ ಬೆಳೆಸು ನನ್ನ ಸಂಸಾರ..

ಎ ಜಿ ಶರಣ್

- ಎ ಜಿ ಶರಣ್

03 Jun 2019, 10:23 am
Download App from Playstore: