ಪ್ರೀತಿ ಮತ್ತೆ ಮುಂದುವರಿದಾಗ
ಪ್ರೀತಿಯ ಮಾತು ಮೌನವಾಯಿತು
ಕಂಗಳ ನೋಟ ಮಂಕಾಯಿತು
ಹೆಂಗೆ ಮರೆಯಲಿ ನಿನ್ನ
ಎಂಗೆ ಇರಲಿ ನಿನ್ನಗಲಿ ನಾನು
ಹೃದಯ ಭಾರವಾಯಿತು
ನಿಟ್ಟಸಿರೊಂದು ಹೊರಬಿತ್ತು ಅಗ್ಗಳಿಕೆಯನೆನೆದು...
ತಿರುಗಿ ನೋಡಿದೆ ನಿನ್ನ
ಮುಗುಳ್ನಗೆಒಂದು ಮೂಡಿಬಂತು
ಹೃದಯ ಸಂತಸದ ಗೂಡಾಯಿತು
ಹೊಸ ಚೈತನ್ಯ ಕೂಡಿಬಂತು
ಕಂಗಳು ಹೊಳಪಾಯಿತು
ಮಾತು ಹರಿವ ನೀರಾಯಿತು
ಮತ್ತೆ ಬದುಕು ರಂಗ್ ಕಂಡಿತು
- santhoshkumar
01 Jul 2019, 09:51 pm
Download App from Playstore: