ನೆನಪು

ಆ ಕಂಗಳ ಬೆಳದಿಂಗಳ 

ನೆನಪಿಂದು ಮೂಡಿದೆ ...

ಮರೆಯಾದ ಆ ಕಿರುನಗೆಯನ್ನು ನೆನೆದು

ಮನನೊಂದು ಹಾಡಿದೆ


ಆ ಊರು ಆ ಬೀದಿ ಆ ಮನೆ

ಆ ಮನೆಯ ಹಿತ್ತಿಲು

ಆ ಬೇಲಿ ಆ ಪೊದೆ ಆ ಮರ

ಆ ಕವಿದ ಕತ್ತಲು

ಗುಟ್ಟಾಗಿ ಪ್ರತಿಸಂಜೆ ನನಗಾಗಿ ಅಲ್ಲಿ 

ಕಾಯುತ್ತಿತ್ತು ಒಂದು ಜೀವಾ ...

ಸಿಹಿಮಾತಿನಿಂದ ಸವಿಸನಿಹದಿಂದ

ಕಳೆಯುತ್ತಿತ್ತು ಎಲ್ಲ ನೋವಾ  ... 


ಕಿಣಿ ಕಿಣಿ ಬಳೆಗಳ ನಿಲುನಾದ          

ಮೂಗುತಿಯ ಮೆರುಗು  

ತುರುವಿನ ಮಲ್ಲಿಗೆ ನರುಗಂಪು  

ನಾಚಿಕೆಯ ಸೆರಗು  ... 

ಆ ಸ್ಪರ್ಶ ಆ ಹರ್ಷ ರೋಮಾಂಚನ 

ಆ ನಗೆ ಬೆಳದಿಂಗಳು  

ಕನಸಂತೆ ಕರಗಿ ವಾಸ್ತವತೆ ಎರಗಿ 

ಈಗಿಲ್ಲಿ ಬಿರು ಬಿಸಿಲು


ಆ ಕಂಗಳ ಬೆಳದಿಂಗಳ 

ನೆನಪಿಂದು ಮೂಡಿದೆ ...

ಮರೆಯಾದ ಆ ಕಿರುನಗೆಯನ್ನು ನೆನೆದು

ಮನನೊಂದು ಹಾಡಿದೆ ... ... ... 

- Radhika Narasimha

02 Jul 2019, 08:45 pm
Download App from Playstore: