ನಾನೊಬ್ಬ ಭಿಕ್ಷುಕ
ಆ ದೇವರ ಬಳಿ ಜನನದ ಭಿಕ್ಷೆ
ತಾಯಿಯ ಬಳಿ ಜೀವದ ಭಿಕ್ಷೆ
ತಂದೆಯ ಬಳಿ ಬದುಕಿನ ಭಿಕ್ಷೆ
ಗುರುವಿನ ಬಳಿ ವಿದ್ಯೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಕೇಳಲೆಂಗೆ
ಬೆಡಲೆಂಗೆ ನಿಡುವ ಭಿಕ್ಷೆಯನು
ತಂಗಾಳಿಯ ಬಳಿ ಹುಸಿರಿನ ಭಿಕ್ಷೆ
ನೀರಿನ ಬಳಿ ದಾಹದ ಭಿಕ್ಷೆ
ಉದಕದ ಬಳಿ ಹಸಿವಿನ ಭಿಕ್ಷೆ
ಮರದ ಬಳಿ ನೇರಳಿನ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೇಂಗೇ ನಿಡುವ ಭಿಕ್ಷಯನು
ಗೇಳೆಯರ ಬಳಿ ಗೇಳೆತನದ ಭಿಕ್ಷೆ
ಪ್ರೇಯಸಿಯ ಬಳಿ ಪ್ರೀತಿಯ ಭಿಕ್ಷೆ
ಪುರೋಹಿತರ ಬಳಿ ಮಾಂಗಲ್ಯದಾರಣೆ
ಯ ಭಿಕ್ಷೆ ಬಂಧುಭಾಂದವರ ಬಳಿ
ಹಾರ್ಸಿವಾದ ಮತ್ತು ಉಡುಗೊರೆಯ ಭಿಕ್ಷೆ
ತಿರಸ್ಕರಿಸಿರಿಸಲೇಂಗೆ ಮೌಲ್ಯದ ಭಿಕ್ಷಯನು
ಸಿರಿವಂತನ ಬಳಿ ಸಾಲದ ಭಿಕ್ಷೆ
ಕಾರ್ಯದಲ್ಲಿ ಸಂಬಳದ ಭಿಕ್ಷೆ
ಮಡದಿಯ ಬಳಿ ಸಂತಾನ ಭಿಕ್ಷೆ
ನಂತರ ಮಕ್ಕಳ ಆರೈಕೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೆಂಗೆ ನಿಡದ ಭಿಕ್ಷಯನು
ಮಕ್ಕಳ ಬಳಿ ನಿಷ್ಪ್ರಯೋಜಕನೇಂಬ
ಭಿಕ್ಷೆಯ ಪಡೆದು ಭಂದುಭಾದವರಿಂದ
ಎಳ್ಳು ನೀರುಎಂಬ ಭಿಕ್ಷೆಯ ಪಡೆದು
ಬೊಮಿತಾಯಿಯ ಬಳಿ ಆರಡಿ ಮುರಡಿ
ನೇಲ ಮಾಳಿಗೆಯ ಭಿಕ್ಷೆ ನಾನೊಬ್ಬ ಭಿಕ್ಷುಕ
ಬೇಡಲೆಂಗೆ ಕೇಳಲೆಂಗೆ ನಿಡುವ ಭಿಕ್ಷಯನು
- Vinod Naik Vinod Naik
03 Jul 2019, 02:12 am
Download App from Playstore: