ತಲ್ಲಣ
ಲ್ಲ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಲೀಲೆಯ ನವ ಧಾರೆ ಧಾರೆ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಕಾಲ ಪಥದ ತಿರುವಿನಲ್ಲಿ
ನಮ್ಮದೊಂದು ನಿಲುವ ತಾಣ
ನಮ್ಮ ಆಟ ಹೊಸದೆನಿಸುವ
ಬಗೆಯದೊಂದು ಹೊಸದೆ ಪಯಣ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ನಮ್ಮ ಮನೆ ನಮ್ಮ ಒಲುಮೆ
ನಮ್ಮ ಕರುಳ ಕುಡಿಗಳು
ಮನದ ತುಂಬಾ ಹಾಡು ಗುನುಗಿ
ಹರುಷ ತಂದ ಕ್ಷಣಗಳು
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಹೊಸ ಚಿಗುರಿನ ಉಲ್ಲಾಸಕೆ
ಬೇರಿಗೇನೋ ಸಂಭ್ರಮ
ಮೇಲೊಗಿದಿವೆ ಹೂಗೊಂಚಲು
ಬಯಲ ಬೆರಗು ಘಮಘಮ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಇಗೋ ನಾವು ಹಳಬರು
ಅದೇ ಚಂದ್ರ ಅದೇ ತಾರೆ
ಬರುವರಿನ್ನು ಹೊಸಬರು
- Radhika Narasimha
03 Jul 2019, 09:39 pm
Download App from Playstore: