ದುಡಿಮೆ

ಭಾವನೆಗಳ ಕೂಡಿಟ್ಟು
ಬಾದೆಗಳ ಬದಿಗಿಟ್ಟು
ನವನವೀನತೆಯ ಅರಸುತ್ತ
ದಿನವಿಡೀ ದುಡಿವ ಹಕ್ಕಿಯು ನಾನು

ದೇವಾಲಯಕ್ಕೊಂದೆ
ಮಹಾದ್ವಾರ
ಬಯಕೆಗಳ ನೀಗಿಸಲು
ಆದಾಯವೊಂದೆ ಮಾರ್ಗ

ಸಿಂಪಿಯು ಗಳಿಸುವ
ದಿನವು ಸಾವಿರಾರು ವರಹ
ಸಮಾಜದ ಶಿಲ್ಪಿಯು ನಾನು
ಆದೆ ಅವನಿಗಿಂತ ಬಲು ದೂರ

ಬಳಿಯಿದ್ದಾಗ ಎಲ್ಲವು
ನಮಗೆ ಬಲು ಅಗುರ
ದೂರ ಸರಿದಾಗಲೆ
ತಿಳಿವೆವು ಅದೆ ಅಮರ



ಶಾರದ

- ಶಕುಂತಲಾ

17 Jul 2019, 09:27 am
Download App from Playstore: