ಪ್ರೇಮ ಶೃತಿ

ನನ್ನೊಲವಿನ ಬಾನಂಗಳದಿ
ನೀ ಹೊಳೆವ ಚಂದಿರನಂತೆ!!
ಮುದ್ದಿಸಲು ನಾ ಬರುವ ಮುನ್ನ
ಕರಗಿ ನೀ ಎಲ್ಲಿ ಹೊರಟೆ!!

ಸಾಗರದ ಅಲೆಯು ಹಿಂತಿರುಗಿ
ಬಂದೊಮ್ಮೆ ಕರೆಯುವುದು ನಿನ್ನ!!
ಬೊರ್ಗರೆತದ ನನ್ನ ಒಲುಮೆ
ಚಿಮ್ಮೆ ಬಿಡಲೇ ನಾ ನಿನ್ನ ಕಡೆಗೆ!!

ಆಕಾಶ ಗಂಗೆಯೇ ಧುಮುಕಿ
ನಿನ್ನನು ಕರೆತರಲಿ ನನ್ನ ಬಳಿಗೆ!!
ಅನುರಾಗದ ಬೇಲಿ ಹಾಕಿ
ಬಂದಿಸಿಡುವೆ ನನ್ನ ಎದೆಯೊಳಗೆ!!

ಅಂಗೈಯ ಬೊಗಸೆಯಲಿ ಪ್ರೀತಿ
ಅದು ಹೇಳಿ ತೀರದ ರೀತಿ!!
ಋತುಮಾನ ಕಳೆದರೂ ಅಳಿಯದು
ನನ್ನೊಳಗೆ ಮಿಡಿದ ಈ ಪ್ರೇಮ ಶೃತಿ!!

- ಪಿ.ಜಿ.ಜ್ಯೋತಿ

17 Jul 2019, 12:25 pm
Download App from Playstore: