ಚೆಲುವಿನ ಸೊಬಗು
ಚೆಲುವಿನ ಸೊಬಗು
ಈ ಭೂಮಿಯ... ಆ ಆಗಸ ...
ಎಷ್ಟೊಂದು ಚೆಲುವು ಒಲವು...
ಗಿರಿಯ ಧರೆಯ ಸಾಲೆ ಓಹೋ..
ಏನಿದು ಸೊಬಗಿನ ಲೀಲೆ.. ಓಹೋ ಮನವನು ತಣಿಸುವ ಲೀಲೆ..!!
ಚೆಲುವು ತುಂಬಿ ನಗುವ.....
ಆ ಮುಗಿಲ ನಕ್ಷತ್ರ ಹೊಳಪೆ...
ಗಿಡಮರ ಹಸಿರೆಲೆ ನಾಚಿಸುವಂತೆ
ಎಷ್ಟೊಂದು ಸುಂದರ ಚೆಲುವೆ...!!
ಕಾಮನ ಬಿಲ್ಲಿನ ಜಡೆಯೆ...
ಕಟ್ಟಿದೆ ತೆರೆತೆರೆ ಹೊಳೆಯೇ...
ಹಿಮದ ಮಡಿಲ ಮಂಜಿನಲ್ಲಿ ಕವಿದಿದೆ
ಶ್ವೇತವೆ ಸುರಿದಿದೆ ಮಲ್ಲಿಗೆ ಸುಗಂಧವೆ..!!
ರವಿಯ ತೆರೆದ ಕುಂಜದಿ....
ಬೀಸಿದಿ ಬಗೆಬಗೆ ಸೆರೆಯ
ಎಲೆಗಳಲ್ಲಿ ಮರೆಮಾಚಿದೆ ನೋಡು
ಕೋಗಿಲೆ ಇಂಚರ ಧ್ವನಿಯು ... !!
ಕಣ್ಢ ಮಿಟುಕಿಸಿ ಹೆಣ್ಣು
ಹಾರಿದೆ ರೆಪ್ಪೆಯ ಬಡಿದು
ಅಕ್ಕರೆ ಮುಗಿಲಿನ ನೀಲಿಯ ಸೌಂದರ್ಯ
ನಾಚಿಸಿ ಮಳೆಹನಿಯಾಗಿ !!
ಅವಳ ನಗುವ ಮೊಗವು
ಚಂದ್ರನು ತುಟಿಯಲ್ಲಿ ಅಮೃತ ಹನಿಯು
ಸಾಗಿದೆ ತೊರೆತೊರೆ ಹಬ್ಬರದಲ್ಲಿ....
ಪ್ರೀತಿಯ ಹುಣ್ಣಿಮೆ ರಾತ್ರಿ !!
ಜಿ ಟಿ ಆರ್ ದುರ್ಗ
ಬಂಗಾರಪೇಟೆ
- Gtramachandrappa Ramachandrappa
20 Jul 2019, 04:40 pm
Download App from Playstore: