ಸ್ವಂತಿಕೆ ಯಾವುದು

ಸ್ವಂತಿಕೆ ಯಾವುದು?

ಈ ಜೀವನವೆ ಬಾಡಿಗೆ ಬಂದಿರುವಾಗ
ಯಾವುದು ಸ್ವಂತಿಕೆ ಹೇಳಣ್ಢ

ಹೆತ್ತವರು ಉಚಿತವಾಗಿ ಜನ್ಮಕೊಟ್ಟರು
ಬದುಕಲು ನಮಗೆ ಒಳ್ಳೆಯ ಮಾರ್ಗ ಹೇಳಿಕೊಟ್ಟರು
ಮಾತುಗಳೆಲ್ಲಾ ಬಿಟ್ಟಿ ನಡೆಯುವುದೆಲ್ಲಾ ಬಿಟ್ಟಿ
ವಾಸಿಸುವುದೆಲ್ಲ ಬಿಟ್ಟಿ ಸ್ವಂತಿಕೆ ಎಲ್ಲಿದೆ ನೀನೆ ಹೇಳಣ್ಣ

ಕಲಿತ ಪಾಠ ಸ್ವಂತಿಕೆಯಿಂದ ಬಂದದ್ದೇಳಣ್ಣ
ನೀನು ಓದಿದ್ದಲ್ಲ ಹೃದಯದಿಂದ ಬಂದದ್ದೇನಣ್ಣ
ಸ್ವಂತಿಕೆ ಯಾವುದು ಭೂಮಿಯಲ್ಲಿ ಕಾಣುವುದೇನಣ್ಣ
ಎಲ್ಲವು ನಾವು ಇನ್ನೊಬ್ಬರ ನೋಡಿ ಕಲಿಯಬೇಕಣ್ಣ

ಕುಡಿಯುವ ನೀರು ಬಿಟ್ಟಿ
ಸೇವಿಸುವ ಗಾಳೀಯು ಬಿಟ್ಟಿ
ಮೂರು ಹೊತ್ತು ತಿನ್ನುವುದು ಬಿಟ್ಟಿ
ಹುಟ್ಟುವ ಮುನ್ನ ಯಾರದು ಇಲ್ಲಿ ಸ್ವಂತಿಕೆ ಇಲ್ಲಣ್ಣ

ಬರೆಯುವ ಮುನ್ನ ಓದಲೆ ಬೇಕು ಇನ್ನೊಬ್ಬರ ಕಥೆಯ
ಹಿರಿಯರ ಮಾರ್ಗದಲ್ಲಿ ಹೋಗಲೆ ಬೇಕು ನಾವು ಎಲ್ಲರು
ಪದಗಳ ಗುಚ್ಚ ಜ್ಞಾನದ ಬೆಳಕು ಆಲೋಚನೆ ಕೇಳಣ್ಣ
ಅಪ್ಪ ಅವ್ವರ ಕಲಿಸಿದ ಗುರುಹಿರಿಯರ ಮಾರ್ಗದಲ್ಲಿ
ಸಾಗಿ ಬರುವ ಜೀವನ ಪಾಠ ಸ್ವಂತಿಕೆ ಎಲ್ಲಣ್ಣ

ನನ್ನದು ಯಾವುದು ಸ್ವಂತಿಕೆ ಇಲ್ಲ
ಜ್ಞಾನದ ಬಲುಗುಟ್ಟು
ದಿನವು ಬದುಕಿಗೆ ತಿರಿಯುತಲಿರುವೆವು ಇನ್ನೊಬ್ಬರನ್ನು ಇನ್ನೊಬ್ಬರ ಕೈಕೆಳಗೆ ಕೂಲಿಕಾರರು ನಾವು
ಸ್ವಂತದು ಎಲ್ಲಿದೆ ಹೇಳಣ್ಣ
ಜ್ಞಾನದ ನಿಘಂಟು ಹುಡುಕುವರೆಲ್ಲ ಸ್ವಂತಿಕೆ ಇಲ್ಲಣ್ಣ

ಜೀವವ ಹೆತ್ತವರು ಕೊಟ್ಟಿರುವಾಗ ಸ್ವಂತ ಇದೆಯಣ್ಢ
ಆಲೋಚನೆ ಎಂಬ ಜ್ಞಾನವು ಮನಸಿನದು ಕಾಣಣ್ಣ
ಬುದ್ಧಿ ಎಂಬುದು ತನ್ನಿಚ್ಚೆಯಲ್ಲ ಬಲು ಯೋಚಿಸಬೇಕಣ್ಣ
ಭೂಮಿಯಲ್ಲಿ ಬಾಡಿಗೆದಾರರು ಸ್ವಂತಿಕೆ ಎಲ್ಲಣ್ಣ ನೀನು ಅರ್ಥವ ತಿಳಿಯಣ್ಣ

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- Gtramachandrappa Ramachandrappa

20 Jul 2019, 07:50 pm
Download App from Playstore: