ಜಡೆ
ಎಂಥ ಚೆಂದ ಉಂಟು
ಎಂಥ ಅಂದ ಉಂಟು
ನಿನ್ನ ಜಡೆಯು ತಂಗಿ (!!)
ಹಾವಿನಂಥ ಹೆಡೆ
ಬಳ್ಳಿಯಂತೆ ಬಳುಕುವ
ನವಿರಾದ ನಿನ್ನ ಜಡೆ (ಎಂಥ )
ಗಂಗೆಯ ಬಂದಿಸಿದ ಜಡೆ
ಉರಗಪತಾಕನನ್ನುರುಳಿಸಿದ
ವಯ್ಯಾರದ ಜಡೆ (ಎಂಥ )
ಅಕ್ಕನ ಅಕ್ಕರೆಯ ಜಡೆ
ನಾರಿಯರ ನೆಚ್ಚಿನ ಜಡೆ
ಪುರಾಣ ಪ್ರಸಿದ್ಧ ನಿನ್ನ ಜಡೆ ( ಎಂಥ )
ಸಾಹಿತಿಗಳ ಸ್ಪೂರ್ತಿಯ ಸೆಲೆ
ಪ್ರೇಮಿಗಳ ಪ್ರೀತಿಯ ಬಲೆ
ಎಲ್ಲೆಲ್ಲು ನಿನ್ನದೆ ಅಲೆ ( ಎಂಥ )
ಶಾರದ
- ಶಕುಂತಲಾ
24 Jul 2019, 09:19 am
Download App from Playstore: