ನನ್ನ ಮನೆ

ಮನೆಯೊಂದು ದೇವಾಲಯ
ನಾ ಕಂಡೆ ಅಲ್ಲಿ ಸುಖದ ಆಲಯ

ಅಕ್ಕರೆಯ ಪ್ರೀತಿ ತೋರಿಸಿದರು ನನ್ನ ಮನೆ ಮಂದಿ
ನಾ ಪುಳಕಿತಾಳಾದೇ ಆನಂದದಿಂದ.......

ನಾ ಕಂಡೆ ಮನದ ಸಂತೋಷ ನನ್ನ ಮನೆಯಲ್ಲಿ
ಕಷ್ಟ ಸುಖ ಎರೆಡರ ಭಾವನೆಯ ದೋಣಿಯಲ್ಲಿ.....

ಸಂಯಮದ ಬದುಕಿರ ಬೇಕು ನನ್ನ ಮನೆಯಲ್ಲಿ
ಎಲ್ಲದನ್ನು ಮೀರಿ ಇರಬಹುದು ಜೀವನದ ಹಾದಿಯಲ್ಲಿ

ಬದುಕಿನ ಜಟಕಾಬಂಡಿ ಎಳೆಯಬೇಕು ಗುಡಿಯಲ್ಲಿ
ಜೀವನದುದ್ದಕ್ಕೂ ಬರುವ ಜೊತೆಗಾರರಲ್ಲಿ.....

ಕೊನೆವರೆಗೂ ನನ್ನ ಮನೆ ಹರುಷದ ಹೊನಲಾಗಿರಬೇಕು
ನಾ ಆಗ ಸಂತೋಷದಿಂದ ತೂಗಾಡಬೇಕು....



ಅನಿತಾ ಹರೀಶಭಂಡಾರಿ ಕುತ್ಪಾಡಿ ✍️✍️✍️✍️

- An

28 Jul 2019, 10:05 am
Download App from Playstore: