ನನ್ನವಳು
...
ಹೇ ಹುಡುಗಿ ನನ್ನ ಬಾಳ ಸಂಗಾತಿಯಾಗುವೆಯಾ?
ಎಂದು ಕೇಳಿದ ಹುಡುಗನಿಗೆ..
ಹುಡುಗಿ ಕೊಟ್ಟ ಉತ್ತರ ಇದೆ ನೋಡಿ.. !!!
ದೇಹ ನೋಡಿ ಆಕರ್ಷಣೆಯಾಗಿದ್ದರೆ ದಯಮಾಡಿ ದೂರ ಹೋಗಿಬಿಡು.. ನಿನ್ನ ಮನದರಸಿ ಯಾಗಬೇಕೇ ಹೊರತು ದೇವದಾಸಿಯಾಗಲು ಇಷ್ಟವಿಲ್ಲ ನನಗೆ….!!
ಮನೆಯ ಕೆಲಸಕ್ಕಾಗಿ ಮದುವೆ ಯಾಗುವುದಾದರೆ ಕ್ಷಮಿಸಿಬಿಡು.. ಸಮಾಜದ ಮುಂದೆ ಇವಳು ನನ್ಮ ಹೆಂಡತಿ ಎಂದು ಕೈ ಹಿಡಿಯುವ ಗಂಡು ನನ್ನವನಾಗಬೇಕು ಎಂಬ ಆಸೆ ಇದೆ ನನಗೆ..!!
ದೇಹದ ಭಾಗಗಳ ವರ್ಣನೆ ಬೇಡ ನನಗೆ.. ನಿನ್ನ ದೇಹದ ಒಳಗಿರುವ ಆತ್ಮವೇ ನಾನು ಎನ್ನುವುದಾದರೆ ಹಿಡಿದುಕೋ ಈ ಕೈಯನು ಬಿಡದ ಹಾಗೆ..
ನಾಲ್ಕು ಗೋಡೆಯ ಮಧ್ಯೆ ನಾನೆಂದಿಗೂ ನಿನ್ನ ದಾಸಿಯಾಗಿರುವೆ..!!
ನಾಲ್ಕು ಜನರ ಮುಂದೆ ನಿನ್ನ ರಾಣಿಯಾಗ ಬಯಸುವೆ..
ಸಾವಿರ ಬೆಲೆ ಬಾಳುವ ಸೀರೆಯೊಡವೆ ಬೇಡ ನನಗೆ.. ಬೆಲೆ ಕಟ್ಟಲೂ ಆಗದ ನಿನ್ನ ಪ್ರೀತಿ ಕಾಳಜಿಯನ್ನು ಅಪೇಕ್ಷೆ ಪಡುತ್ತಿರುವೆನೆಂದು ನೆನಪಿರಲಿ ನಿನಗೆ..!!
ಬೆಳಗ್ಗೆ ಎದ್ದಾಗ ನಾ ಕಾಣುವ ಮುಖ ನಿನ್ನದಾಗಿರಲಿ.. ನಾ ಕೊನೆಯದಾಗಿ ಕಣ್ಣು ಮುಚ್ಚುವಾಗ ನನ್ನ ತಲೆ ನಿನ್ನ ತೊಡೆಯ ಮೇಲಿರಲಿ..
ಜೀವ ಇರುವವರೆಗೂ ನಾ ನಿನ್ನ ಮಗುವಂತೆ ಪೋಷಿಸುವೆ..!!
ನನಗೆ ನೋವಾದಾಗ ನಾನೆ ನಿನ್ನ ಮಗುವಾಗುವೆ.. ತಪ್ಪು ಮಾಡಿದಾಗ ಕಠೋರ ಮಾತುಗಳನ್ನಾಡಬೇಡ.. ಒಮ್ಮೆ ತಿದ್ದಿಬಿಡು ಮತ್ತೆಂದೂ ಆ ತಪ್ಪು ಮಾಡುವುದಿಲ್ಲ..!!
ನಾ ತಿನ್ನುವ ಮೊದಲ ತುತ್ತು ಎಂದಿಗೂ
ಅದು ನಿನ್ನ ಪಾಲು..
ತುತ್ತು ಕೊಡಲು ನೀನಿಲ್ಲವಾಗಿ ಹೋದರೆ.. ನೆನಪಿಟ್ಟುಕೋ..
ಈ ನನ್ನ ದೇಹದಲಿ ಉಸಿರು ಇರುವುದಿಲ್ಲ
ಅರೆ ಘಳಿಗೆಯೂ..!!
ನೆನಪಿಟ್ಟುಕೋ ನೀ ಸೋತಾಗ ನಿನ್ನ ಜೊತೆಯಲಿ ನಾ ಎಂದಿಗೂ ನಿಲ್ಲುವೆನೆಂದು..
ಗೆದ್ದಾಗ ದಯಮಾಡಿ ಮರೆಯದಿರು..
ನಿನ್ನ ಬೆನ್ನ ಹಿಂದೆ ನಾನಿದ್ದೆನೆಂದು..!!
ನಿನ್ನ ಆರೋಗ್ಯದ ವಿಷಯದಲ್ಲಿ ವೈದ್ಯಳಾಗುವೆ.. ಊಟ ಬಡಿಸುವಾಗ ತಾಯಿಯಂತೆ ನಾ ನಿನ್ನ ನೋಡುವೆ..
ಮುಖ ಸುಕ್ಕಾದಮೇಲೂ ನೀ ನನಗೆ ರಾಜನೇ.. ಊರುಗೋಲು ಹಿಡಿಯುವ ಸಮಯ ಬರದಂತೆ ಕಾಯುವ ನಿನ್ನ ರಾಣಿಯೂ ನಾನೆ..!!
ಇಷ್ಟೆಲ್ಲಾ ಹೇಳಿದ ಮೇಲೂ ನಿನ್ನ ಮನಸ್ಸಲ್ಲಿ ನಾನಿದ್ದರೆ.. ತಲೆ ಬಗ್ಗಿಸುವೆ ತಾಳಿ ಕಟ್ಟಿಬಿಡು..
ಮಾತು ಕೊಡುವೆ ಕೊನೆವರೆಗೂ ಜೊತೆಯಲಿರುವೆ..!!
p..gold
- Parashuram2337
28 Jul 2019, 06:59 pm
Download App from Playstore: