ಕತ್ತಲು
ಕತ್ತಲೆಯೊಳ ಮನಸು
ಜೊತೆಯಾಗಿ ಕಾಡಿದೆ ಆಗ ನೀನು
ಪ್ರೀತಿಯೆಂಬ ಸಂಕೋಲೆಯು
ಮನಕ್ಕೆ ಆವರಿಸಿದ ಕ್ಷಣ
ಕತ್ತಲೆಯ ಸಂಕೋಲೆಯಲ್ಲಿ
ನಾ ಬಂಧಿತಳಾದ ಪ್ರತಿ ಕ್ಷಣ
ಆಗ ಬೆರಗಾಗಿ ಅರಿಯದೆ ಹೋದೆ ನಾನು....
ಕತ್ತಲೆಯಲ್ಲಿ ನೀನು ಹೋದ
ಕಾಲಿನ ಹೆಜ್ಜೆಯ ಗುರುತು
ಕಗ್ಗತ್ತಲಲ್ಲಿ ಕಾಣದೆ ಹೋಯಿತೆ
ನಿನ್ನ ಹೆಜ್ಜೆ ಗುರುತು....
ನೀನು ಇರದಾಗ ಮನಸ್ಸಿನಲ್ಲಿ
ಆವರಿಸಿತು ಬೇಸರದ ಕತ್ತಲು
ನಿನಗಾಗಿ ಕಾದೆ ನಾ ಮನದ ಕತ್ತಲಲ್ಲಿ......
ನೀನು ಬಂದು ಬಿಡಿಸು ಪ್ರೀತಿಯ
ಕತ್ತಲೆಯ ಸಂಕೋಲೆಯನ್ನು
ಕೊಂಡೊಯ್ಯು ಪ್ರೀತಿಯನ್ನು
ಬೆಳಕಿನ ಭಾವನೆಯ ಕಡೆಗೆ........
ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️✍️✍️
- An
29 Jul 2019, 01:18 pm
Download App from Playstore: