ಅಕ್ಕ

ಅಕ್ಕ ಎನ್ನುವದೇ ಒಂದು ಆನಂದ
ಅವಳನ್ನು ಕರೆಯುವ
ಭಾವವೇ ಸದಾ ಆನಂದ.......

ಜೊತೆಯಾಗಿ ಬೆಳೆದವು
ಊಟ ಪಾಠದ ಜೊತೆಯಲ್ಲಿ
ನೋವು ನಲಿವುಗಳ ಆಟದಲ್ಲಿ
ಕಷ್ಟ ಸುಖದ ಹಾದಿಯಲ್ಲಿ.......

ಅಮ್ಮ ನಾ ಅಕ್ಕರೆಯ ಮಗಳು
ಅವಳನೋವಿನಲ್ಲೂ ಜೊತೆಯಾದವಳು
ಜಗತ್ತಿನ ರೂಪದಲ್ಲಿ ಎರಡನೇ ತಾಯಿಯಾದವಳು

ಒಡಲಾಳದ ಪ್ರೀತಿ ಕೊಟ್ಟ ಒಡಹುಟ್ಟಿದವಳು
ಪ್ರತಿಯೊಂದು ಭಾವನೆಯಲ್ಲೂ ಸ್ನೇಹಮಹಿ ಇವಳು
ಎಲ್ಲರ ಸಹನೆಯ ಸಹಕಾರದವಳು
ಚಿರಕಾಲ ಜೊತೆ ಜೊತೆ ಯಾಗಿ ಬಾಳುವಳು

ಇವಳೇ ನನ್ನಕ್ಕ ...............

ಅನಿತಾ ಹರೀಶ್ ಭಂಡಾರಿ ಕುತ್ಪಾಡಿ,✍️✍️✍️✍️✍️

- An

30 Jul 2019, 02:38 pm
Download App from Playstore: