ನನ್ನ ಪ್ರೀತಿ
ಮುಸ್ಸಂಜೆಯ ಸೂರ್ಯನ ಮರೆಮಾಡಿ ಎದುರಾ ದಿರಿ ನೀವು ನನ್ನ ಬಳಿಗೆ ಭಯ ತುಂಬಿ ಬಾರದವು ಹೃದಯದೊಳಗಿನ ಮಾತುಗಳು ಹೊರಗೆ ಪ್ರತಿದಿನ ನಿಮ್ಮ ಕಣ್ಣೋಟಕ್ಕೆ ಕರಗಿ ನೀರಾಯಿತು ಮನದ ಬಯಕೆ ಮೊದಲ ನಿಮ್ಮ ಚುಂಬನದಿಂದ ಸೋತು ಶರಣಾಯಿತು ಪ್ರೀತಿ ತುಂಬಿದ ನನ್ನ ಮನ ಎಂದು ಕಾಣದ ಮೊದಲ ನಿಮ್ಮ ಅಪ್ಪುಗೆ ಕರೆದೊಯ್ದಿತು ನನ್ನ ಸ್ವರ್ಗ ಸುಖದೆಡೆಗೆ ಕನಸುಗಳು ಚಿಗುರೊಡೆಯುವ ಮುಗ್ಧ ಮನಸಿನೊಳಗೆ ಸಂತಸದಿ ಹಾರೈಸಿ ದಿರಿ ಜೊತೆಯಾಗಿ ನನಗೆ ನಿಮ್ಮೊಳಗೆ ಮಗುವಾಗಿ ಕಳೆಯುತ್ತಿರುವ ಕ್ಷಣಗಳು ಚಂದ ನನ್ನೊಳಗೆ ನೀವಿರಲು ಅದುವೇ ಮಹದಾನಂದ ಸುಂದರ ಪ್ರೀತಿ ಇದು ಮನತುಂಬಿ ತೆನೆಗೆ ನನ್ನ ಮದುವೆಯ ಸಂಬಂಧ ಕೂಡಿತು ಅವರ ಜೊತೆಗೆ ಸದ್ಗುಣದ ವರ ಮನಸಲ್ಲಿ ನೆಲೆಸಿರಲು ನಾನು ನಮ್ಮಿಬ್ಬರ ಬದುಕು ಪ್ರೀತಿ ತುಂಬಿದ ಹಾಲುಜೇನು
- nagamani Kanaka
05 Aug 2019, 12:12 pm
Download App from Playstore: