ಮಲಗೆನ್ನ ಕಂದ

ಜೋ ಜೋ ಜೋ ಜೋ
ಮಲಗೆನ್ನ ಕಂದ!!
ನಿದಿರೆ ಕನಸಲಿ ಬರುವ
ಚಂದಿರನು ಚೆಂದಾ!!

ಅಳುವ ತುಟಿ ಮೇಲೆ
ಕೆನೆ ಹಾಲ ಹನಿ ಲೀಲೆ!!
ನೀ ನಗಲು ಹೊಳೆದಿಹುದು
ನವರತ್ನದ ಮಾಲೆ!!

ಕಡಲ ಗರ್ಭದಲಿ
ಮಲಗಿರುವ ಭಗವಂತ!!
ಭೂಮಿಗೆ ಬಂದಿಹನು
ಮಗುವಾಗಿ ನನಗಂತ!!

ಇರುಳ ಈ ಬದುಕಲ್ಲಿ
ನೀನಾಗಿ ಬಂದೆ ಹಗಲು!!
ನೀನಿರಲು ಈ ಮನೆಯು
ಆ ಸ್ವರ್ಗಕೂ ಮಿಗಿಲು!!

- ಪಿ.ಜಿ.ಜ್ಯೋತಿ

17 Aug 2019, 10:25 pm
Download App from Playstore: