ಸೂತಕದ ಮನೆ.....
ಸೂತಕದ ಮನೆಯಲ್ಲೊಂದು
ನೋವಿನ ಚೀಲ ಗಂಟು ಕಟ್ಟಿ
ಇಟ್ಟಿಹರು ಯಾರಿಗೂ ಕಾಣದ ಹಾಗೆ
ಒಂದೊಂದೆ ಅಣಕ ಮಾತುಗಳು ಇಣುಕಿ
ಇಣುಕಿ ನೋಡುತಿವೆ ಹೊರಬಂದು
ಶಾಂತದಿಂದಿರುವ ಮನಸ್ಸನ್ನು
ಕೆಣಕಿ ಎಬ್ಬಿಸಿ ಮನೆಮಂದಿಯನ್ನೆಲ್ಲ
ಕಾಣದೂರಿಗೆ ಸಾಗಿಸಲೆಂದು .............
ಬಚ್ಚಿಟ್ಟು ಕೊಂಡಿದ್ದ ನೋವಿನ ಚೀಲ
ಬಿಚ್ಚಿಟ್ಟು ಕೊಂಡು ಉಸಿರುಗಟ್ಟಿಸುವಂತಾಗಿದೆ
ಮನೆ ಮಂದಿಗೆಲ್ಲ......
ಸಂಬಂದಗಳ ಸೂಳಿಯಲ್ಲಿ ನಿಂತಿರುವಾಗ
ಬೇರೋಂದು ಎದ್ದು ಮರವನ್ನೆ ಮಸಣದೆಡೆಗೆ
ಸಾಗಿಸಿದಂತಾಗಿದೆ ಇಗ.......
ಹುಟ್ಟುವವರಾರು ಸಾಯುವವರಾರು
ಹುಟ್ಟು ಸಾವಿನ ನಡುವೆ ಬದುಕಿ ನರಳುವವರಾರು
ಇಂತವರ ನಡುವೆ ಸತ್ತುಬದುಕುವವರೆ ಹೆಚ್ಚು...
ನಡುವಲ್ಲಿ ಇರುವವರಿಗೆ ಬಂದಿದೆ ಕಂಟಕದ ನಂಟು ಬಿಡಿಸಿಕೊಳ್ಳುವ ಹಾಗಿಲ್ಲ ಉಸಿರುಗಟ್ಟಿ ಸಾಯುವ ಹಾಗು ಇಲ್ಲ ಇದ್ದು ನರಕ ಅನುಭವಿಸಬೇಕಿದೆ ಇಗ.........
ಸೂತಕದ ಮನೆಯಲ್ಲೊಂದು
ನೋವೀನ ಚೀಲ ಬೀಡಿಸಿಟ್ಟರೆ
ಅಳಿವು ಉಳಿವು ಇಲ್ಲ.......
- ರಾಗಸಿರಿ....
29 Aug 2019, 11:44 am
Download App from Playstore: