ನಮ್ ಮನೆ ಸಣ್ಣಿ

ಸೀರೆಯ ಸೆರಗನು ಸೊಂಟಕೆ ಸಿಕ್ಕಿಸಿ
ಕಟ್ಟಿಗೆ ಒಲೆಯ ಎದುರಲಿ ಕುಳಿತ
ಮುಂಗುರುಳಂಟಿದ ಬೆವರಿದ ಕೆನ್ನೆಯ
ಸಣ್ಣಿಯ ನೋಡಲು ಬಲು ಸೊಗಸು

ಒಲೆಯ ಬೆಂಕಿಯ ಊದಿಯೆ ಹೊತ್ತಿಸಿ
ಕಂಬನಿ ತುಂಬಿದ ಕಂಗಳ ಧರಿಸಿ
ಅಡುಗೆಯ ಮಾಡಲು ಅಣಿಯಾಗಿರುವ
ಸಣ್ಣಿಯ ನೋಡಲು ಬಲು ಸೊಗಸು

- arun

31 Aug 2019, 08:57 am
Download App from Playstore: