ಪ್ರೀತಿ ಬಾಧೆ
ಪ್ರೀತಿಯೇ ಹೀಗೇಕೆ ನನ್ನ ನೀನು ಸೆಳೆವೆ,
ಬೇಡ ಬೇಡ ಬೇಡ ಅಂದ್ರು ಬಳಿಯಲ್ಲಿಯೇ ಸುಳಿವೆ,
ಹೃದಯದೊಳಗೆ ಕಿಡಿ ಹೊತ್ತಿಸಿ ಹೀಗೇಕೆ ಸುಡುವೆ,
ಇನ್ನು ಎಷ್ಟು ಕಾಯಬೇಕು ಎಂದು ನನ್ನ ಬಿಡುವೆ?
ಪ್ರೀತಿ ಸತ್ಯ ಎಂಬ ಗಾದೆ ಮಾತ ನಂಬದಾದೆ,,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.
ಅವಳು ನನ್ನ ಮರೆತರೂ ಮರೆತಿಲ್ಲ ನನ್ನ ಮನಸು,
ಈಗಲಾದ್ರೂ ಮಾತು ಕೇಳು ನೆನಪ ದೂರ ಕಳಿಸು,
ಹೃದಯದೊಳಗೆ ಇರುವ ಭಾರ ಬೇಗ ಕೆಳಗೆ ಇಳಿಸು,
ಇಲ್ಲದಿದ್ರೆ ನೋವಿನ ಜೊತೆ ಬದುಕೋ ಪಾಠ ಕಲಿಸು.
ಕ್ಷಣ ಕ್ಷಣ ಪ್ರತಿಕ್ಷಣವು ನಾನು ಅವಳಿಗಾಗಿ ಕಾದೆ,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.
ನನ್ನ ಹಾಗೆ ಪ್ರೀತಿಯಲ್ಲಿ ನೊಂದ ಹಲವು ಜನ,
ಕವಿಗಳಲ್ಲದಿದ್ರು ಬರೆಯುವರು ಸಾಲು ಕವನ,
ಒಳಗೆ ಎಷ್ಟೇ ನೋವಿದ್ದರೂ ಹೊರಗೆ ನಗುವ ಕಲೆ,
ಕಲಿಯಬೇಕು ಪ್ರೀತಿಯಲ್ಲಿ ಸೋತವರಿಂದಲೇ.
ಪ್ರೀತಿ ಉಕ್ಕಿ ಹರಿಯುತ್ತಿರಲು ಜೀವ ಉರಿಯುತ್ತಿದೆ,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.
ಗಟಕ್ ಸಿಂಗ್
- gataksingh
02 Sep 2019, 05:58 am
Download App from Playstore: