ನೀನಾದರೂ ಇರಬೇಕಿತ್ತು

ಒಂಟಿ ಜೀವ ಭಾವ
ತುಂಬಿ ಮನವ
ಕೊಡುವಾಗ ನೋವ
ನೀನಾದರೂ ನೋಡಬೇಕಿತ್ತು

ದಿಕ್ಕು ಕೆಟ್ಟ ಹೆಜ್ಜೆ
ಒಂಟಿಯಾದ ಕೈಗಳ
ಜೊತೆ ಜೊತೆಯಾಗಿ
ನೀನಾದರೂ ಬರಬೇಕಿತ್ತು

ಕಣ್ಣುಮುಚ್ಚಿ ಕಂಬನಿಯಲಿ
ಎದೆಯ ಭಾರವ ಇಳಿಸುವಾಗ
ಕೊನೆಯ ಪಕ್ಕ ಕಣ್ಣೀರ ಒರೆಸಲು
ನೀನಾದರೂ ಸನಿಹವಿರಬೇಕಿತ್ತು

ಮಾತಾಗದ ಭಾವವನ್ನೆಲ್ಲ
ಗಂಟಲೊಳಗೆ ಉದುಗಿಸಿ
ಮೌನದಲಿ ಹುಸಿನಗುವಾಗ ನಿಜವ
ನೀನಾದರೂ ತಿಳಿಯಬೇಕಿತ್ತು

ಮನವ ಬೆತ್ತಲಾಗಿಸಲಾಗದೆ
ಕತ್ತಲಲಿ ನಿಟ್ಟುಸಿರ ಜೊತೆ
ಸರಸವಾಡುವಾಗ ಬೆಳಕಿಡಿಯಲು
ನೀನಾದರೂ ಇರಬೇಕಿತ್ತು

ಕೈಗಳ‌ ಹಿಡಿದು
ಎದೆಗಪ್ಪಿ ಹೂಮುತ್ತಿಟ್ಟು
ನಿನ್ನೊಡನೆ ನಾನಿರುವೆನೆಂದು
ನೀನಾದರೂ ಹೇಳಬೇಕಿತ್ತು
ಚಂದಿರ ನೀನಾದರೂ ಹೇಳಬೇಕಿತ್ತು

- ಶ್ರೀಕಾವ್ಯ

04 Sep 2019, 07:55 pm
Download App from Playstore: