ನನ್ನಯ ಚಿಟ್ಟೆ

ನಿನ್ನನು ನೋಡಿದ ಮೊದ ಮೊದಲು
ಕಂಡೆನು ಮೊಗದಿ ಚಿಟ್ಟೆಯ ಚೆಲುವು
ಹಿಡಿಯಲು ಕಾತುರ ನಾ ನಿನ್ನನ್ನು
ದೂರಕೆ ಸಾಗಿದೆ ನೀ ಇನ್ನಿನ್ನು

ಸಿಕ್ಕಿದೆ ನೀನು ದಿನಗಳಲೆಲ್ಲೊ
ಆಗಲೂ ನಿನ್ನಲಿ ಚಿಟ್ಟೆಯ ಚೆಲುವು
ಆದೆವು ನಾವು ಜೀವದಿ ಒಂದು
ಹತ್ತಿರವಿದ್ದೆ ನೀನೂ ಅಂದು

ಹೀಗೆ ಕಳೆಯಿತು ದಿನಗಳು ಹೇಗೋ
ಅಳಿದಿದೆ ಚಿಟ್ಟೆಯ ಪಕ್ಕಗಳೆರಡು
ಕಂಡೆನು ನಿನ್ನಲಿ ಕೋಪದ ಮೊಗವು
ಹಿಂದಕೆ ಇಟ್ಟೆನು ಹೆಜ್ಜೆಗಳೆರಡು.

ಕೋಪವು ಕೆಲವು ಸಮಯದಿ ಒಂದೆ
ಉಳಿದಿದೆ ಪ್ರೀತಿಯು ಮೊದಲಿನ ಹಂಗೆ

- arun

05 Sep 2019, 08:00 pm
Download App from Playstore: