ಸಿಹಿ ನುಡಿ
ದೇಹವೆಂಬುದು ತೊಗಲು ಬೊಂಬೆ
ಮನುಷ್ಯ ಸಮಯದ ಕೈ ಗೊಂಬೆ
ನಾನ್ಯಾರು? ನೀನ್ಯಾರು? ಇವನ್ಯಾರು?
ಅವನ್ಯಾರು? ನೆಪವಷ್ಟೇ ನಾವೆಲ್ಲರು..
ಹುಟ್ಟಿದಾಗ ಸಿಹಿ, ಸತ್ತರೆ ಹಾಲು ತುಪ್ಪ
ನಾನು, ನನ್ನದು ಭ್ರಮೆ.. ತಿಳಿ ನೀ ಬೆಪ್ಪ
ನಗು, ಅಳು, ಪ್ರೀತಿ, ರೋಷ, ದ್ವೇಷ
ಮಾನವನ ಮುಖಾಡವಿಲ್ಲದ ವೇಷ
ತನ್ನ ಸುತ್ತಲೂ ತಾನೇ ಹೆಣೆದು ಜೇಡರ ಬಲೆಯ
ಕಳೆದೋಯಿತು ಜೀವನ ಹೆಣೆಯಲು ಬಲೆಯ
ಅದರೊಳು ಸಿಕ್ಕು ಹೊರ ಬರಲೆಲ್ಲಿದೆ ಸಮಯ
ಹುಡುಕಾಟದಲ್ಲೇ ಮುಗಿವುದು ಜೀವನದಧ್ಯಾಯ
ಮಾಯಾ ಜಿಂಕೆಯಂತೆ ಹಣವೆಂಬುದು
ಹಿಡಿಯಲು ಹೋದರೆ ಸುಲಭದಿ ಸಿಗದು
ಸಿಕ್ಕವನಿಗಂತೂ ನೆಮ್ಮದಿ ಕೊಡದು
ಸಿಗದವನಿಗಂತೂ ಕಾಡದೆ ಬಿಡದು
ಇರುವಾಗ ನೀ ನಕ್ಕು ಪರರ ನಗಿಸುತಲಿರು
ಪ್ರೀತಿಸಿ, ಗೌರವಿಸೆಲ್ಲರ ಯಾರನ್ನೂ ದ್ವೇಷಿಸದಿರು
ದ್ರೋಹ, ಮೋಸ, ವಂಚನೆಯ ಮಾಡದಿರು
ಪ್ರೀತಿ ಇದ್ದರೆ ಸಾಕು ಬೇಕಿಲ್ಲ ಬೇರಾವ ದೇವರು
- Tribhuvan
13 Sep 2019, 09:52 am
Download App from Playstore: