ಆನಂದವ ಹೇಗೆ ಹೇಳಲಿ

ನಮ್ಮ ಕನಸೊಂದು
ಮಗುವಾಗಿ ಇಂದು
ಈ ಭೂಮಿಗೆ ಬಂದಾಯಿತು!!
ಈ ಶೃಷ್ಠಿಯ ತುಂಬ
ಹಸಿ ಹಸಿರಿನ ಚೆಂದ
ಎಲ್ಲೆಲ್ಲೂ ನವಿರಾಯಿತು!!

ಮುಂಜಾನೆಯ ಅರುಣ
ಎಳೆ ಬಿಸಿಲಿನ ತರುಣ
ಹೊಂಬೆಳಕನು ನೀ ತಂದೆಯಾ!!
ಕೋಗಿಲೆಗಳೆ ಕೇಳಿ
ಎಲ್ಲೆಲ್ಲೂ ಸಾರಿ
ನಮ್ಮ ಮಡಿಲಿನ ಆನಂದವ!!

ಇಬ್ಬನಿ ಮಣಿ ಸಾಲೆ
ಹಸಿರೆಲೆಗಳ ಮೇಲೆ
ಹೋಳೆ ಹೊಳೆದು ನೀ ಹಿಗ್ಗುವೆ!!
ಅಂಗೈಯ ಮೇಲೆ
ಹಸುಕಂದನ ಲೇಲೆ
ಎತ್ತಾಡುತ ನಾ ಹಿರಿಹಿಗ್ಗುವೆ!!

ತಿಂಗಳ ಮನೆಯಲ್ಲಿ
ಬೆಳದಿಂಗಳ ಹೋಳಿ
ಕಂಗಳಿಗೆ ಹಿತ ನೀಡಿವೆ!!
ತಂಗಾಳಿಯ ಜೋಲಿ
ನಮ್ಮ ಕಂದನಿಗೆ ಲಾಲಿ
ಆನಂದವ ಹೇಗೆ ಹೇಳಲಿ!!

- ಪಿ.ಜಿ.ಜ್ಯೋತಿ

05 Oct 2019, 03:30 pm
Download App from Playstore: