ಮನಸು
ಮಗುವ ಮುಗ್ಧ ಮನಸು ನೋಡಿ
ಮಂತ್ರ ಮುಗ್ಧ ನಾದೆ ನಾನು
ಕಂಡದ್ದೆಲ್ಲಾ ಬಯಸಿ ಕೇಳುವ
ಕಿಶೋರ ಮನವ ಒಲಿಸೆ ನಾನು
ಅರಿಯಬಹುದೆ ಸುಲಭದಲ್ಲಿ
ಚಂಚಲಚಿತ್ತ ಚಕೋರಿ ಮನವ
ಅಂಧಕಾರದಲ್ಲಿ ಮುಳುಗಿ
ಪ್ರೀತಿಯಲ್ಲಿ ಸೋತ ಮನವು
ಸ್ಫಟಿಕದಷ್ಟು ಸ್ಪಷ್ಟ ಖಚಿತ
ನನ್ನ ತಂದೆ ಮನದ ನಿಲುವು
ಬೆಣ್ಣೆಯಂತೆ ಮೃದುವು ಕಾಣಿ
ಮಗುವಿಗಾಗಿ ತಾಯ ಮನವು
ಕುಸುಮದಂತೆ ನಯವು ಸೂಕ್ಷ್ಮ
ನನ್ನ ಪ್ರಿಯೆಯ ನವಿರು ಮನಸು
ಹತ್ತಿಯಂತೆ ಹಗುರ ನೋಡಿ
ನನ್ನ ತುಂಟ ತಂಗಿ ಮನವು
ಎಂದೊ ಕರಗದಿಹದು ನೋಡಿ
ನನ್ನ ಬಾಸ ಕಲ್ಲು ಮನಸು
ಶ್ವೇತ ಶುಭ್ರ ಹಾಳೆಯಂತೆ
ಗೆಳೆಯನಾ ತೆರೆದ ಮನವು
ಕಲ್ಪನೆಗೂ ಮೀರಿಹುದು
ಕರುಣಾಮಯಿ ಆ ದೇವನ ಮನವು!!
- ಜೈಮಿನಿ
06 Oct 2019, 05:33 am
Download App from Playstore: