ದಶಾವತಾರ

ಪೂರ್ವ ಕರ್ಮ ಕಳೆಯಲೆಂದು
ಕಂದನಾಗಿ ಇಳೆಗೆ ಬಂದೆ

ಜ್ಞಾನವನ್ನು ಕೂಡಲೆಂದು
ವಿದ್ಯಾರ್ಥಿಯಾಗಿ ಶಾಲೆಗೋದೆ

ಎರಡು ಕಾಸು ಗಳಿಸಲೆಂದು
ಆಧಿಕಾರಿಯಾಗಿ ಮೆರೆದೆ

ಹೂವ ಮನದಿ ಪ್ರೀತಿಮಾಡಿ
ಕನ್ಯೆ ವರಿಸಿ ಗೃಹಸ್ಥನಾದೆ

ಮನೆಯ ಕಟ್ಟಿ ಕಾರು ಓಡ್ಸಿ
ಎಲ್ಲ ಗೆದ್ದೆ ಎಂದುಕೊಂಡೆ

ಮಕ್ಳಿಗೆಲ್ಲ ಮದುವೆ ಮಾಡಿ
ತಂದೆಯಿಂದ ಮಾವನಾದೆ

ಕೆಲಸದಿಂದ ನಿವೃತ್ತಿಯಾಗೆ
ಪೌತ್ರ ರೊಡನೆ ಆಡುತಿರುವೆ

ತನುವು ಮನವು ಮಾಗಿ ಹೋಗಿ
ದೈವ ಭಕ್ತಿ ಹೆಚ್ಚು ಆಗಿ
ತೀರ್ಥ ಯಾತ್ರೆ ಮಾಡ ಹೊರಟೆ

ಬೆನ್ನು ಬಾಗಿ ಕಣ್ಣು ಹೋಗಿ
ಕೈಯು ಕಾಲು ಆಡದಾಗಿ
ಮನದಿ ದೈವ ನೆನೆಯುತಿರುವೆ

ಪ್ರಾಣ ದೇಹ ಬಿಡುತಲಿರಲು
ಇಳೆಯ ಮಾಯೆ ಬಿಡದು ಆಗಿ
ಮತ್ತೆ ಗರ್ಭವರಸಿ ಹೊರಟೆ!!

- ಜೈಮಿನಿ

10 Oct 2019, 11:04 am
Download App from Playstore: