ಪ್ರಾರ್ಥನೆ
ಕಳಂಕಿತ ಹೃದಯದಿ
ಬೇಗುದಿಯ ಕಟ್ಟೆಯೊಡೆದು
ಮುಗ್ಗರಿಸಿ ಮುಂದೆ ನಡೆಯಲಾಗದೆ...
ಬೇಸತ್ತ ಮನದಿ
ದುಃಖದ ಕಟ್ಟೆಯೊಡೆದು
ಜಾರಿದ ಕಣ್ಣೀರ ತಡೆಯಲಾಗದೆ...
ಬಾಡಿದ ಜೀವದಿ
ನಿಶ್ಯಕ್ತಿಯ ಬೆವರೊಡೆದು
ಭಾರವಾದ ಕೖೆಗಳೆರಡನು ಎತ್ತಲಾಗದೆ...
ನಿನ್ನ ಸಮ್ಮುಖದಿ
ನಿಲ್ಲಲಾಗದ ಭಯ ಮಿಡಿದು
ಮುಂದೇನೆಂದು ದಾರಿ ಕಾಣದೆ...
ಹಲುಬುತಿದ್ದೇನೆ ನಾನಿಂದು
ನನ್ನನೀ ಕ್ಷಮಿಸೆಯಾ...
ಓ ದೇವಾ..?
- Mohammad Hassan
09 May 2016, 05:45 pm
Download App from Playstore: