ದೀಪಾವಳಿ ದೀಪಾವಳಿ

ಬಂದಿತು ನಮ್ಮಯ ದೀಪದ ಹಬ್ಬ
ಮನೆ-ಮನವನು ಬೆಳಗುವ ಜ್ಯೋತಿಯ ಹಬ್ಬ
ಎಲ್ಲರ ಕರೆಯುತ ದೀಪವನ್ನು ಉರಿಸುತ
ಬಂದಿತು ಎಲ್ಲರ ನೆಚ್ಚಿನ ಹಬ್ಬ ದೀಪಾವಳಿ

ಮನದ ಕತ್ತಲೆಯನ್ನು ಕಳೆಯುವ ಹಬ್ಬ
ಕತ್ತಲೆಯಿಂದಾವರಿಸಿದ ಮನೆಯನು ಬೆಳಕಾಗಿಸುವ ಹಬ್ಬ
ಪಟಾಕಿ ಸಿಡಿಸಿ ಸಂಭ್ರಮಿಸುವ ಹಬ್ಬ
ಬಂದಿತು ಎಲ್ಲರ ನೆಚ್ಚಿನ ಹಬ್ಬ ದೀಪಾವಳಿ

ಬಣ್ಣ-ಬಣ್ಣದ ದೀಪದ ಬಟ್ಟಲು
ಬಟ್ಟಲಿನಲ್ಲಿ ಪ್ರದೀಪವ ಬೆಳಗುತ
ಎಲ್ಲರಿಗೂ ಹಬ್ಬದ ಶುಭಾಶಯ ಕೋರುತ
ಬಂದಿತು ಎಲ್ಲರ ನೆಚ್ಚಿನ ಹಬ್ಬ ದೀಪಾವಳಿ

- Pradeep Malabadi

27 Oct 2019, 12:12 pm
Download App from Playstore: