ಹೆತ್ತವರು ಯಾರು.......?
ಭೂಮಿ ತಾಯಿಯ ಮಡಲಿಗೆ
ತಂದ ನನ್ನ ಮಹಾತಾಯಿ ಯಾರು
ಅಂತಹ ಗೊತ್ತಿಲ್ಲ.....
ತಾಯಿ ಯಾರು ಅಂತಹ ಗೊತ್ತಿಲ್ಲ
ಅಂದ ಮೇಲೆ ತಂದೆಯನ್ನು
ಹೇಗೆ ಹುಡಕಲಿ ನಾನು...
ಯಾರಿಗೆ ಬೇಡವಾದ ಮಗುವಾದೆ.
ನನ್ನ ಜನ್ಮ ನೀಡಿದ
ಹೆತ್ತವಳು ಬೀಸಾಕಿ ಹೋದಳು.
ಕಸದ ಗುಂಡಿಯಲ್ಲಿ.....
ಹಸುಗೂಸು ಕಾಣಲಿಲ್ಲ ಯಾರ
ಕಣ್ಣಿಗೆ... ಕಸದ ತಿಪ್ಪೇ ಸೂರು
ಆಯಿತು ಆ ದಿನ
ಭಿಕ್ಷುಕ ಕಂಡು ಸಾಕಿಸಲುಹಿದ ನನ್ನನ್ನು.
ನೀರೇ ತಾಯಿಯ ಹಾಲು ಆಯಿತು ..
ಭಿಕ್ಷೆ ಬೇಡಿ ತಂದ ಅಳಿಸಿದ ಅನ್ನ ಗಂಜಿ ಆಯಿತು.
ಬಾಳೆಯ ಎಲೆ ತಾಯಿಯ ಮಡಿಲು ಆಯಿತು.
ತಾನು ತಿಂದು ನನ್ನ ತಿನಿಸಿ ಬೆಳೆಸಿದ..
ತನ್ನ ಮಗನಾದ
ಜನ್ಮದ ಸತ್ಯ ಹೇಳಿದಾಗ ನಾನೇನು
ಮಾಡಲಿ.... ನನ್ನ ಜನ್ಮಕ್ಕೆ ಕಾರಣರಾದ
ಕಾರಣೀಭೂತರನ್ನು ಹುಡಕಲೇ...ಮರೆತು
ಬಿಟ್ಟೇನು ನನ್ನ ಜನ್ಮದ ನಿಜಾಂಶವನ್ನು..
ಸಾಕಿದ ತಂದೆ ನನ್ನ ರಟ್ಟೆ ಬಲಿಯುವ
ಮುಂಚೆ ಇಹಲೋಕ ತ್ಯಜಿಸಿದ....
ನನ್ನ ಜೀವನ ಜಟಿಲವಾಯಿತು. ಮುಂದೆ...
ಸಾಕಿದ ತಂದೆಯ ಕೆಲಸ ನನ್ನ ಕಾಯಕವಾಯಿತು....
ಚಿಂದಿ ಆಯುವ ಬದುಕು ಶುರುವಾಯಿತು.
ಗುಡಿ ಗುಂಡಾರದ ಪ್ರಸಾದ, ಸತ್ತವರ
ಪಿಂಡದ ನ್ಯೇವದ್ಯ ಮುಷ್ಠಾನ ಆಯಿತು
ಹೆತ್ತವರು ಮುಂದೆ ಬಂದು ಭಿಕ್ಷೆ ಹಾಕಿ
ದಾನಿಗಳು ಆದರೇನು ಗೂತ್ತಿಲ್ಲ.
ಹೆತ್ತವರ ಮೂಲ ಗೊತ್ತಿಲ್ಲದ
ತಬ್ಬಲಿಯು ನಾನದೇ.....
ನನ್ನ ಮುಂದಿನ ಜೀವನಕ್ಕೆ ದಿಕ್ಕು ಬೇಕೆಂದು
ಹೆತ್ತವರು ಮೂಲ
ಹುಡುಕುತ್ತಾ ಹೂರಟಿರುವೇ ಹೆತ್ತವಳು ಯಾರು
ಯಾವ ಊರು ಎಂದು ಗೊತ್ತಿಲ್ಲ....
ಯಾರದರು ನನ್ನ ಮಗ ಎಂದು ಕರಿದು.
ಮುದ್ದಿಸುವರು ಎಂದು..?
ಎಮ್ ಎಮ್ ಕಾಶಿನಕುಂಟಿ.
೯೭೪೩೪೪೯೦೬೩
- Akash Patil
31 Oct 2019, 07:28 am
Download App from Playstore: