ನೆನಪುಗಳು

ಬರೀ ನೆನಪುಗಳ ನಾವೆ......

ಕತ್ತಲ ಲೋಕದಲ್ಲಿ
ಕನಸಿನ ಮಾಯೆ
ಬೆತ್ತಲ ಭುಗಿಲಲ್ಲಿ
ಕಾಮದ ಕಲ್ಪನೆಯ ಛಾಯೆ...!!

ಸ್ವರಗಳು ಗುಯ್ ಗುಟ್ಟುತ್ತಿವೆ
ಮನಗಳ ಭಾವ ಸಿಡಿಯುತ್ತಿವೆ
ಬರೀ ನೆನಪುಗಳ ಅಂಬರಗಳಿಗೆ ಸೇತುವೆ ಇಲ್ಲಿವೆ..!!

ಸರಿಸೃಪಗಳ ಸಾಲಿನಲ್ಲಿ
ಸರಿಗಮಗಳ ನಾದ ಚೆಲ್ಲಿ
ಮದಗಜಗಳ ಬೆಟ್ಟದಲ್ಲಿ
ಚಿಲಿಪಿಲಿಗಳ ಕಲರವ ಕೇಳಿ
ಗುಯ್ ಗುಟ್ಟುತ್ತಿವೆ ಬರೀ ನೆನಪಿನ ನಾವೆ...!!

ಗಾಳಿ ಮಳೆಯ ಭಾವದಲ್ಲಿ
ರತ್ನ ಮಂಜರಿ ಪ್ರೇಮಿಯಾಗಿ
ಕಾಣುತ್ತಿವೆ ಬರೀ ನೆನಪುಗಳ ನಾವೆ.......!!
ಜೈ ಶ್ರೀ ರಾಮ್

- Mallu Kumbar

12 Nov 2019, 09:58 pm
Download App from Playstore: