-
ಕೊಡವಿಕೊಂಡು ಎದ್ದೇಳು...
ಕೊಡವಿಕೊಂಡು ಎದ್ದೇಳು... (ಪಲ್ಲವಿ)
ಈ ಬದುಕು ನಿನ್ನದು
ಸಾವಿರಾರು ಜನ್ರಿದೃನೂ ಒಂಟಿಯಾಗೇ ಸಾಯೋದೂ..
ಭೂಮಿ ಮ್ಯಾಗೇ ಇರೋವಷ್ಟು ದಿನಳು
ಉಸಿರಾಡಬೇಕು ಎಲ್ರೂನೂ
ಹೊಟ್ಟೆಗಾಗೀ ಕೆಟ್ಟದ್ ಮಾಡ್ಬೇಡ
ಮಡಿಕ್ಕೆಂಡಿರೂ ದೇವ್ರು ದೊಡ್ಡೋನು ಅನ್ಕಂಡು
ಲೆಕ್ಕಾಚಾರದ ದಿನ್ಗಳಿವು ಕಾಯೋಂಗಿಲ್ಲ
ಯಾರಿಗೂನೂ..
ಕುಂತ್ರೆ ಕುಡುಕೆ ಹೊನ್ನು ಸಾಲಂಗಿಲ್ಲ ಅಂದಾವ್ರೇ ಹಿರೀಕರು..
ಆಡೋ ಪದ ಚೆಂದಿದ್ರೆ. ಊರ ಜನ್ಗಳೆಲ್ಲಾ ಅಣ್ ತಮ್ಮಂದಿರು..
ತಂಗ್ಳನ್ನ ತಿಂದೃನೂ ಬದುಕ್ಬಿಡು ನೆಮ್ದೀ ಪಡ್ಕಂಡು...
ಕೊಡವಿಕೊಂಡು ಎದ್ದೇಳು ಈ ಬದುಕು ನಿನ್ನದು
ಪವನ ಕುಮಾರ ಕೆ ವಿ
ಬಳ್ಳಾರಿ 9900515957
- PavanKumarKV
18 Nov 2019, 04:52 pm
Download App from Playstore: