ಇದೆ.ಇಲ್ಲ.ಇದೆಇಲ್ಲಎರಡೂ ಇದೆ.ಇದೆಇಲ್ಲಎರಡೂ ಇಲ್ಲ.
ಯಾರೋ ಅನ್ನಿಸಿದ್ದು ಇವ್ನೆ ಅಂತ.
ನೀನು?
ನಾನು ಅನ್ಕೊಂಡಿದ್ದು ಇವ್ನೆ ಅಂತ.
ಇವಾಗ ಏನ್
ಅನ್ಕೊಂಡಿದೀಯೋ?
ಇವ್ನೆ. ಇವ್ನಲ್ಲ.ಇವ್ನೆ ಇವ್ನಲ್ಲ ಎರಡೂ ಇವ್ನೆ. ಇವ್ನೆ, ಇವ್ನಲ್ಲ ಎರಡೂ ಇವ್ನಲ್ಲ. .
ಮುಂದೆ ಏನ್ ಅನ್ಕೋತಿಯೋ?
ನಿಂಗೇಕೆ? ನಂಗೇಕೆ?.............
ನಮ್ಮೂರಿನ ಗುಡಿಯಲ್ಲಿರೋ ಅವ್ನು
ಯಾಕೋ ದೇವ್ರು ಅನ್ನುಸ್ತಿಲ್ಲ ನನ್ಗೆ.
ಇನ್ಯಾರು ಅನ್ಸ್ತಾವ್ರೆ?
ಕಾಗದದ ಮೇಲೆ ನಾನು ಬಿಡಿಸಿದ ಇವ್ನು
ನನ್ಗೆ ದೇವ್ರು ಅನ್ನಿಸ್ತಿದೆ.
ಏನಿವಾಗ?
ಮುಟ್ಟಲಿಲ್ಲ ಮುದ್ದಾಡಲಿಲ್ಲ ಒಂದಿನನೂ ಅವ್ನನ್ನು.
ಮುಟ್ಬೇಕಿತ್ತು, ಮುದ್ದಿಸಬೇಕ್ಕಿತ್ತು?
ಹೆದ್ರುಸ್ತಿದ್ನಲ್ಲಪ್ಪ ಬೆಂಕಿ ಹಿಡ್ಕೊಂಡು
ಯಾರು?
ಅಂಗಿಬಿಚ್ಕೊಂಡು, ದಾರಾಸುತ್ಕೊಂಡು
ನಿಂತಿದ್ನಲ್ಲ ಅವನು ನಮ್ಮಿಬ್ಬರ ಮಧ್ಯೆ..
ಹೌದಲ್ವಾ !ಮತ್ತೆ ಇವನು?
ಮುಟ್ಟುತಿನಿ, ಮುದ್ದಾಡ್ತಿನಿ
ನಾನು?
ನನ್ನ ಕೇಳೋ ಅವಶ್ಯಕತೆನೇ ಇಲ್ಲಾ.
ಯಾರ್ಬೇಕಾದ್ರು ,ಯಾವಾಗಬೇಕಾದ್ರು
ಆಮೇಲೆ?
ಬೆಂಕಿ ಹಿಡ್ಕೊಂಡಿರೋ ಧ್ವನಿ ಇಲ್ಲ
ನಮ್ಮಿಬ್ಬರ ಮಧ್ಯೆ.
ಮತ್ತೇನಿದೆ?
ಗಾಳಿ ಇದೆ...
ಏನು?
ಗಾಳಿ ಇದೆ. ಗಾಳಿ ಇಲ್ಲ. ಗಾಳಿ ಇದೆ ಇಲ್ಲ ಎರಡೂ ಇದೆ ಗಾಳಿ ಇದೆ ಇಲ್ಲ ಎರಡೂ ಇಲ್ಲ........
-ಪ್ರವೀಣಾ ಸಿಂಗೋನಹಳ್ಳಿ.
- praveens singonahalli
22 Nov 2019, 10:22 pm
Download App from Playstore: