ನಿದಿರೆ...

ಹಾಳೂರ ಸಂತೆಯಲ್ಲಿ
ಜಿಟಿ-ಜಿಟಿ ಸುರಿವ ಮಳೆಯಲ್ಲಿ
ಜನಜಂಗುಳಿಯ ನಡುವೆ
ಭಿಕ್ಷುಕನದ್ದು ಕುಂಭಕರ್ಣ ನಿದಿರೆ...

ಐಶಾರಾಮಿ ಮನೆಯಲ್ಲಿ
ಆಳು-ಕಾಳುಗಳ ಸೇವೆಯಲ್ಲಿ
ಶ್ರೀಮಂತಿಕೆಯ ನಡುವೆ
ಅವನಿಗೆ ಬರುತ್ತಿಲ್ಲ ನಿದಿರೆ..

ಎಷ್ಟಿದ್ದರೇನು? ಏನಿಲ್ಲದಿದ್ದರೇನು?
ಮನಸ್ಸಿಗೆ ನೆಮ್ಮದಿ ಇಲ್ಲದಲ್ಲಿ
ಹೇಗಾದರೂ ಬಂದೀತು
ನೆಮ್ಮದಿಯ ನಿದಿರೆ..!?

- ಅಕ್ಷತ

22 Nov 2019, 10:55 pm
Download App from Playstore: