ಅವನೆಂಬ ನೆನಪು

ಬೀಸಿ ಬರುವ ಗಾಳಿ
ಮೆಲ್ಲಗೆ ಕಿವಿಯಲ್ಲಿ
ಸರಿಗಮವಾಗಿ ಧ್ವನಿಸಲು
ಅವನೆಂಬ ನೆನಪಿನ ಬುತ್ತಿ
ತಾನಾಗೆ ತೆರೆದುಕೊಂಡಿದೆ.

ರಾತ್ರಿಯ ನೀರವ ಮೌನ,
ಮುರಿದ ಕೊಂಬೆಯ ಶಬ್ದ,
ಕಣ್ಣಿನಿಂದ ಜಾರಿದ ಹನಿ,
ಅರಿವಿಗೆ ಬಾರದೆ ಮನ
ಅದೆನನ್ನೊ ತಡಕಾಡುತ್ತಿದೆ.

ತಿಳಿ ಸಂಜೆ ಬೀಸುವ
ತಂಪಾದ ಗಾಳಿಗೂ
ನಡುರಾತ್ರಿ ಕಾಡುವ
ಮುಗಿಯದ ಕನಸಿಗೂ
ಅವಿನಾಭಾವ ಸಂಬಂಧ..

- ಅಕ್ಷತ

24 Nov 2019, 04:24 pm
Download App from Playstore: