ನಿನ್ನಂತೆಯೇ.. ಮುಗಿಯದು ನಿಲ್ಲದು..

ಇರುವೆಯೊಂದು ತನ್ನ ಗೂಡು
ಇರುವುದೆಂದೋ
ಇಲ್ಲವೆಂದೋ
ನಿಲ್ಲದೆ ಮಣ್ಣ ಅಗೆದು
ಮಣ್ಣಿನ ರಾಶಿ ಸುರಿಸುತಿದೆ....

ನನ್ನೇ ನೋಡದ ನಾನು
ಕಾಣದ ನಿನ್ನ ಪ್ರೀತಿಗೆ
ಕೈ ಚಾಚುತಿರುವೆ....
ನನ್ನೇ ನೋಡುವ ನೀನು
ಹಿಡಿಯಲಾಗದ ಪ್ರೀತಿಯ
ಹಾಗೆಯೇ ಏಕೆ ಇಟ್ಟುಕೊಂಡಿರುವೆ....

ಮರದ ಮೇಲಿನ ಪಕ್ಷಿಗಳ ಸರಸ
ನಿಸರ್ಗದ ಜೊತೆ ಜೊತೆ ನಿಲ್ಲದೆ
ಸಾಗುತಿದೆ.....
ನನ್ನ ವಯಸ್ಸೂ ಕೂಡ
ಮನೆಬಿಟ್ಟು ಹೊರಗೆ ಬಾ
ಬಯಲು ಎಂದೂ ನಿಲ್ಲದು
ನೀನೂ ಕೂಡ..........

ನಿನ್ನ ಹಿಂದಿರುವ ಜಡೆಯ
ಮುಂದಿರುವೆ ನಾನು.....
ಆ ಜಡೆಯ ಮೌನಕ್ಕೆ
ನಿನ್ನ ಕಣ್ಣಿನ ಮಾತಿನ ಭಯಕ್ಕೆ
ಹಿಡಿದು ನಿಲ್ಲಿಸಕ್ಕಾಗದ ಪ್ರೀತಿಗೆ...

ಮಕ್ಕಳಂತೆ ಹಠ ಮಾಡು
ಮುದ್ದಿಸುತೀನಿ ಕಲಿತವಳಾಗಬೇಡ..
ಇಲ್ಲವಾದರೆ ಈ ದಡ್ಡನ
ಬೆರಳಿಡಿದು ತಿದ್ದಿಸಿ ಕಲಿಸು ಅಮ್ಮನಂತೆ..
ಸುಮ್ಮನಿರಬೇಡ...
ಸುಮ್ಮನಿರಲಾಗುವುದಿಲ್ಲ....

ಹಳೆಯ ನೆನಪು ಬದಲಾಗಿದೆ
ಅದಿತ್ತೇ ಅನ್ನೋಥರ....
ಇದ್ದಿದ್ದರೆ ಅದುನ್ನೇ ಹಿಡಿದಿರುತಿರಲಿಲ್ಲವೇ.?
ನಿನ್ನ ನಗು ಅಳು ಮಾತು ಮೌನ
ಕಲಿಸುತಿದೆ....
ಇನ್ನೂ ಜಾಸ್ತಿ ಉಂಟಾಗುತಿದೆ....

ಯಾವಾಗ ಇದೆಲ್ಲ ಹೇಳು ಅಂತ
ಯಾವಾಗ ಇದುಕ್ಕೆ ಕೊನೆ ಅಂತ
ಕೇಳ್ಬೇಡ...
ನಾ ಹೇಳೋಕಾಗಲ್ಲ
ಹಗಲು ರಾತ್ರಿಗೆ ಕೊನೆ ಮೊದಲು
ಯಾವುದು ಅಂತ....
ಪ್ರೀತಿ ಹಗಲು ರಾತ್ರಿ.

ನದಿಗಳಿಂದ ನೀರು
ಅಣೆಕಟ್ಟು ಸೇರಿದೆ.. ತುಂಬುತಿದೆ..
ಬಾಗಿಲು ತೆರೆಯದಿದ್ದರೆ ಹೇಗೆ...
ಹೊಡೆದು ಹೋಗಿ ಬೆಳೆ ಕೊಚ್ಚಿ ಹೋಗುವುದು.
ಒಂದೊಂದೇ ಬಾಗಿಲ ತೆರೆದಿಬಿಡು...

ನನ್ನ ಪದ ನಿನ್ನಂತೆಯೇ...
ಮುಗಿಯದೂ ನಿಲ್ಲದೂ........

-ಪ್ರವೀಣಾ ಸಿಂಗೋನಹಳ್ಳಿ












mund

- praveens singonahalli

30 Nov 2019, 04:14 pm
Download App from Playstore: