ಒಲವಿನ ದಿಬ್ಬಣದ ಹಾದಿಯಲಿ

ಒಲವಿನ ದಿಬ್ಬಣದ ಹಾದಿಯಲಿ
ಮಂಜಿನ ಹನಿಗಳು ಹೊಳೆದಿರಲಿ
ಹೊಂಗಿರಣದ ಸಿರಿಯ ಬೆಳಕಿರಲಿ
ಹೊಂಬಾಳೆಯು ಶಿರವನು ಬಾಗಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ತುಂತುರು ಮಳೆಯು ಮುತ್ತಿಡಲಿ
ಚಿಗುರೆಲೆಯು‌ ಚಪ್ಪರವ ಹಾಕಿರಲಿ
ಹೂ ಗಂಧದ ಗಾಳಿಯು ಬೀಸಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ಕಾಮನ ಬಿಲ್ಲದು ಬಾಗಿರಲಿ
ಕೋಗಿಲೆಗಳು ಪದವನು ಹಾಡಿರಲಿ
ಜಂಭದ ಕೋಳಿಯು ಕುಣಿದಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ಹೂವಿನ ಹಾಸಿಗೆಯು ಹಾಸಿರಲಿ
ಭೃಮರದ ವಾಧ್ಯವು ಮೊಳಗಿರಲಿ
ಜೇನಿನ ಹೊಳೆಯು ಹರಿದಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ರತ್ನದ ಕಂಬಗಳ ಸಾಲಿರಲಿ
ಸಕ್ಕರೆಯ ರಂಗೋಲಿ ಬಿಡಿಸಿರಲಿ
ಮುತ್ತಿನ ತೋರಣವು ಕಟ್ಟಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ಚೆಲುವದು ಮೈ ಮನ ತುಂಬಿರಲಿ
ಸಡಗರ ಸಂಭ್ರಮವು ನೆರೆದಿರಲಿ
ಉಲ್ಲಾಸದ ಉಡುಗೊರೆ ಜೊತೆಗಿರಲಿ!!

- ಪಿ.ಜಿ.ಜ್ಯೋತಿ

01 Dec 2019, 11:39 am
Download App from Playstore: