ಕಾಣಬೇಡ ಮನವೇ
ಕಾಣಬೇಡ ಮನವೇ
ಹಗಲುಗನಸ...
ಅದು ನುಂಗಿಬಿಡುವುದು
ದಿನದ ಎಲ್ಲ ನಿಮಿಷ...
ಕಾಣಬೇಡ ಮನವೇ
ಹಗಲುಗನಸ...
ಅದು ಕೆಡಿಸಿಬಿಡುವುದು
ನಿನ್ನ ಎಲ್ಲ ಕೆಲಸ...
ಕಾಣಬೇಡ ಮನವೇ
ಹಗಲುಗನಸ...
ಅದು ಅಳಿಸಿಬಿಡುವುದು
ಕೊನೆಗೆ ಕಂಡ ಕನಸ...
- ಪಿ.ಜಿ.ಜ್ಯೋತಿ
01 Dec 2019, 11:56 am
Download App from Playstore: