ಸ್ವಪ್ನದ ಬೆನ್ನೇರಿ
ನಸುಕಿನಲ್ಲಿ ಕಂಡೆನು
ನಾಜೂಕಾದ ಹೊನ್ನು
ಹಿಂದಿಲ್ಲ- ಮುಂದಿಲ್ಲ
ಯಾರಿಗೂ ಇದರ ಸುಳಿವಿಲ್ಲ
ರಾಶಿ- ರಾಶಿ ನಿಂತಿಹಳು
ಬಂಗಾರದ ಅರಸಿ
ಕೈಬೀಸಿ ಕರೆಯುತಿಹಳು
ಮೋಹದ ಬಲೆ ಬೀಸಿ
ನಾಲ್ಕಾಸೆಗೆ ದುಡಿಯುವ ನಾನು
ನಾಯಕಳಾಗಬಲ್ಲೆನೇನು
ತಿರುಕನಂತೆ ಕನಸಕಂಡೆನು
ಮೋಹದಲೆಯಲ್ಲಿ ಬಂಧಿಯಾದೆನು
ಸಂತೃಪ್ತಿ ಅಸಾಧ್ಯ
ಸಾಧಕಳಾಗುವೆ ನೀ ಸಧ್ಯ
ನುಡಿಯೆ ನೈಮಿತ್ತಿಕನು
ಬೆರಗಾಗಿ ನಾನೆದ್ದೆನು
ದಿನಕೊಂದು ಸಂದೇಶ
ನೀಡುತಲಿರುವೆ
ಅರಿವಿಗೆ ಅಸ್ಪಷ್ಟವಾಗಿ
ತೊಳಲಾಟದಲಿ ಮುಳುಗಿಸುವೆ
ಬದಲಾವಣೆಯ ಮಾರುತ
ಹಾಕಲು ತನ್ನ ಅಂಕಿತ
ಹಣೆಬರಹದ ಲಿಖಿತ
ಬದಲಾವಣೆಯದು ನಿಶ್ಚಿತ
ಶಾರದ
- ಶಕುಂತಲಾ
02 Dec 2019, 09:07 am
Download App from Playstore: