ಒಲವಿನ ಹೂವು
ಎದೆಯ ಅಂಗಳದಲ್ಲಿ
ಅರಳಿದೆ ಒಲವಿನ ಹೂವು...
ಜೋಪಾನವಾಗಿ
ಅದನು ಕಾಯಬೇಕಿದೆ ನಾವು...
ಮುಳ್ಳಿನ ಬೇಲಿ ಇಡಲು
ಚುಚ್ಚಿದರೆ ಸಹಿಸದ ನೋವು...
ಗಾಜಿನ ಪಂಜರದೊಳು
ಉಸಿರಿನ ಗಾಳಿ ಇಲ್ಲದೇ ಸಾವು...
ಅಮೃತವನು ಉಂಡರೆ
ರಸಭರಿತವಾದ ರುಚಿ ಮಾವು...
ವಿಷವನು ಉಂಡರೆ
ಕಹಿಪೂರಿತವಾದ ಬೇವು...
ಬೆಚ್ಚಗೆ ಇರಲು
ಹೆಚ್ಚುವುದು ಒಲವಿನ ಕಾವು...
ಅದು ಹೆಚ್ಚಾದರೆ
ಬಾಡುವುದು ಒಲವಿನ ಹೂವು...
- ಪಿ.ಜಿ.ಜ್ಯೋತಿ
09 Dec 2019, 02:03 pm
Download App from Playstore: