ಹುಚ್ಚು ಪ್ರೀತಿ ಭಾಗ ೨

ಹಚ್ಚ ಹಸಿರ ಸ್ವಚ್ಛ ಮನಕೆ
ಚುಚ್ಚಿ ನಗುವ ಹುಚ್ಚು ಬಯಕೆ
ನಿನಗೇಕೆ ಗೆಳತಿ ನಿನಗೇಕೆ

ಕಂಡಹಾಗೆ ಕಾಣದಿರುವ
ಕನಸಿನಲ್ಲೂ ಕಾಡುತಿರುವ
ನೆನಪೇಕೆ ಕಂಬನಿ ಹರಿಸೋಕೆ

ಅವಳೇ ಬಿತ್ತನೆ ಮಾಡಿದಳು
ಹನಿ ನೀರವರಿ ಮಾಡಿದಳು
ಪ್ರೇಮದಿ ಅವಳೇ ಬೆಳೆಸಿದಳು
ಒಲವಿನ ಗಿಡವನು ಎದೆಯೊಳಗೆ
ಪ್ರೀತಿಯು ಚಿಗುರಿತು ನನ್ನೊಳಗೆ

ಮಾಡಿದೆ ಅವಳನು ಮೆರವಣಿಗೆ
ನನ್ನ ಎದೆಯ ಗೂಡೊಳಗೆ
ಆಯಿತು ಪ್ರೀತಿಯ ಬೆಳವಣಿಗೆ
ಅಂಧನು ಕಂಡ ಜಗದಂತೆ
ಮೂಕನು ಹಾಡಿದ ಪದದಂತೆ

ತೊರೆದು ನೀಡಿದ ಭಾಷೆಯನು
ಮರೆತಳು ನನ್ನ ಗಿಡವನ್ನು
ಪ್ರೆಮದಿ ಕೊಂದಳು ನನ್ನನು
ಭೂಮಿಯ ಎಲ್ಲಾ ಹೊಲದಲ್ಲಿ
ಬಿತ್ತನೆ ಮಾಡುವ ಭರದಲ್ಲಿ

-ಬಿ.ಎಂ.ವಿ

- venkatesh murthy

11 Dec 2019, 04:26 pm
Download App from Playstore: