ಒಬ್ಬನೆ ಪಯಣಿಗ

ಪ್ರಜ್ಞಾಪೂರ್ವಕ ಕಣ್ ತೆರೆದು ನೋಡಿದಾಗ ಪಯಣದಲ್ಲಿದ್ದೆ!
ಹೊರಟ ಅರಿವಿಲ್ಲ, ಗುರಿಯ ಪರಿವಿಲ್ಲ.
ಸುತ್ತ ಓಡುವ ಜಗತ್ತು ನಿಂತು ಯೋಚಿಸುವವರಾರು ಇಲ್ಲ!
ನಾ ನಿಂತರೆ ತಳ್ಳಿಕೊಂಡೇ ಹೊರಟವರು,
ಗುರಿ ಅರಿಯದ ಪಯಣಿಗರು.

ಬದಲಾಗುವ ಭಾವನೆಗಳು, ನೆಲೆ ನಿಲ್ಲದೆ ಓಡುವವು.
ಸ್ನೇಹ ಬಾಂಧವ್ಯಗಳು ಕಾಲಚಕ್ರದಲ್ಲಿ ತೆಯ್ಯುವವು.!
ಪ್ರೇಮ ಸ್ನೇಹಗಳ ಬಳ್ಳಿ ಬಳಸಿಕೊಂಡು ನಡೆದವ,
ಋಣ ಬಾಂಧವ್ಯಗಳ ಓಡ ನಡುವೆಯೂ, ನಾ ಒಬ್ಬಂಟಿ ಪಯಣಿಗ.

- ARJUN RAGHAVENDRA

16 Dec 2019, 06:24 pm
Download App from Playstore: